Advertisement
ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಖಾತೆಯಿಂದ ಯೋಜನೆಯ ಡಿಪಿಆರ್ ಅನು ಮೋದನೆ ಗೊಂಡಿದ್ದು ಭಾರತಮಾಲಾ ಯೋಜನೆ ಯಲ್ಲಿ ಸುರಂಗ ಮಾರ್ಗ ನಿರ್ಮಾಣ ಕೈಗೆತ್ತಿಗೊಳ್ಳಲಾಗುತ್ತಿದೆ. ಅವಶ್ಯ ವಿರುವ ಭೂಮಿಯ ಬಗ್ಗೆ ಹೆದ್ದಾರಿ ಪ್ರಾಧಿ ಕಾರ ಸರ್ವೇ ನಡೆಸಿ ವಿವರ ಗಳನ್ನು ಹೆದ್ದಾರಿ ಇಲಾಖೆಗೆ ಸಲ್ಲಿಸಿದ್ದು ದೇಶ ದಲ್ಲಿ ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆ ಯಲ್ಲಿ ಮುಂದಿನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳ ಲಾಗು ವುದು ಎಂದು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಅಗಾಗ ಹೇಳುತ್ತಾ ಬಂದಿದ್ದರೂ ಈ ನಿಟ್ಟಿನಲ್ಲಿ ಯಾವುದೇ ಪೂರಕ ಕ್ರಮಗಳಾಗಿಲ್ಲ.
ಯೋಜನೆಯಲ್ಲಿ ಬರುವ ಬಹುತೇಕ ಪ್ರದೇಶ ಸರಕಾರಿ ಭೂಮಿಯಾಗಿದೆ. ಖಾಸಗಿಯಾಗಿ ಶೇ. 30ರಷ್ಟು ಭೂಮಿ ಯನ್ನು ಮಾತ್ರ ಸ್ವಾಧೀನ ಪಡಿಸಿ ಕೊಳ್ಳಬೇಕಾಗಿದೆ. ಆದುದರಿಂದ ಅಧಿ ಸೂಚನೆಯ ಬಳಿಕ ಭೂಸ್ವಾಧೀನ ಪ್ರಕ್ರಿಯೆ ತ್ವರಿತ ವಾಗಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿರುವುದು ಎಂದು ಇಲಾಖಾ ಮೂಲಗಳು ತಿಳಿಸಿವೆ. ಜಪಾನ್ ಇಂಟರ್‌ನ್ಯಾಶನಲ್ ಕೋ-ಅಪರೇಟಿವ್ ಏಜೆನ್ಸಿ ( ಜೈಕಾ) ಇದರ ಡಿಪಿಆರ್ ಸಿದ್ಧಪಡಿಸಿತ್ತು. ಇದನ್ನು ಜೈಕಾ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲು ಮೊದಲು ನಿರ್ಧರಿಸ ಲಾಗಿತ್ತು. ಆದರೆ ಇದೀಗ ಈ ಪ್ರಸ್ತಾ ವನೆಯನ್ನು ಕೈಬಿಟ್ಟು ಭಾರತ್ ಮಾಲಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳುತ್ತಿದೆ.
Related Articles
Advertisement
ಇದನ್ನೂ ಓದಿ:ಟ್ರಾಫಿಕ್ ಪೊಲೀಸರ ಮೇಲೆ ದಾಳಿ ನಡೆಸಿದ್ದು ನಾವೇ: ಐಸಿಸ್
ಭಾರತಮಾಲಾ ಯೋಜನೆಯಲ್ಲಿ ಈಗಾಗಲೇ ಚೆನ್ನೈ-ಬೆಂಗಳೂರು ನಡುವೆ 262 ಕಿ.ಮೀ. ಉದ್ದದ 20,000 ಕೋ .ರೂ. ವೆಚ್ಚದ ಎಕ್ಸ್‌ಪ್ರೆಸ್ ಹೈವೇಗೆ ಟೆಂಡರ್ ಆಗಿದೆ. ಈಗಾಗಲೇ ಮಂಗಳೂರು-ಬೆಂಗಳೂರು ಮಧ್ಯೆ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣ ಪ್ರಸ್ತಾವನೆಯಲ್ಲಿದ್ದು ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆ ಇದಕ್ಕೆ ಪೂರಕವಾಗಲಿದೆ ಎಂದು ಅಂದಾಜಿಸಲಾಗಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಅಡ್ಡಹೊಳೆ-ಸಕಲೇಶಪುರ ಮಾರ್ಗದ ಮಧ್ಯೆ ದೂರದಲ್ಲೂ ಇಳಿಕೆ ಯಾಗ ಲಿದೆ ಮತ್ತು ಕಡಿಮೆ ಸಮಯದಲ್ಲಿ ಕ್ರಮಿಸಬಹುದಾಗಿದೆ.
ಶಿರಾಡಿ ಘಾಟಿ ಸುರಂಗಮಾರ್ಗ ಯೋಜನೆಗೆ ಸಂಬಂಧಪಟ್ಟಂತೆ ಭೂಸ್ವಾಧೀನ ಅಧಿಸೂಚನೆಗೆ ಕಾಯಲಾಗುತ್ತಿದೆ. ಆಧಿಸೂಚನೆ ಬಂದ ಕೂಡಲೇ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯೋಜನೆಯಲ್ಲಿ ಹೆಚ್ಚು ಸರಕಾರಿ ಜಾಗ ಬರುವುದರಿಂದ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ.– ಮಂಜುನಾಥ್,
ಭೂಸ್ವಾಧೀನಾಧಿಕಾರಿ ಎನ್‌ಎಚ್‌ಎಐ ಹಾಸನ ವಿಭಾಗ