Advertisement
ಶಿರಾಡಿ ಘಾಟಿ ರಸ್ತೆಗೆ ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಜು. 15ರಂದು ಉದ್ಘಾಟನೆಗೊಂಡಿತ್ತು. ಆದರೆ ರಸ್ತೆ ಅಂಚಿಗೆ ಮಣ್ಣು ಹಾಕುವುದು, ಕೆಲವು ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಬಾಕಿ ಇದ್ದುದರಿಂದ ಗುತ್ತಿಗೆದಾರರಿಗೆ ಹೆಚ್ಚುವರಿ 15 ದಿನಗಳ ಸಮಯಾವಕಾಶ ನೀಡಲಾಗಿತ್ತು. ಅಲ್ಲಿಯವರೆಗೆ ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿ ಆದೇಶಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಪೊಲೀಸ್ ವರಿಷ್ಠಾಧಿಕಾರಿ ಸಭೆ ನಡೆಸಿ ನೀಡಿದ್ದ 15 ದಿನಗಳ ಕಾಲಾವಕಾಶ ಜು. 30ಕ್ಕೆ ಕೊನೆಗೊಂಡಿದೆ. ಬಾಕಿ ಕಾಮಗಾರಿಯೂ ಹೆಚ್ಚು-ಕಡಿಮೆ ಪೂರ್ಣಗೊಂಡಿದ್ದು, ಘನ ವಾಹನ ಗಳ ಸಂಚಾರ ಶುರು ಮಾಡ ಬಹುದು ಎಂದು ರಾ. ಹೆ. ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗೆ ಪತ್ರ ರವಾನಿಸಲಾಗಿದೆ.
ಶಿರಾಡಿ ಘಾಟಿಯ ಕಾಂಕ್ರೀಟ್ ರಸ್ತೆ ಅಂಚಿನಲ್ಲಿ ಸುಮಾರು 2 ಅಡಿಯಷ್ಟು ಎತ್ತರವಿದೆ. ಹಾಸನದ ಕಂಪಿಶೆಟ್ಟಿ ಹಳ್ಳಿಯಿಂದ ಗ್ರಾವಲ್ ಕಲ್ಲಿನ ಪುಡಿಯನ್ನು ಕಾಂಕ್ರೀಟ್ ಅಂಚಿಗೆ ಹಾಕಲಾಗುತ್ತಿದೆ. ಸುಮಾರು 13 ಕಿ.ಮೀ. ಉದ್ದದ ಹೊಸ ರಸ್ತೆಯಲ್ಲಿ ಇನ್ನೂ 3 ಕಿ.ಮೀ.ನಷ್ಟು ಮಣ್ಣು ಹಾಕಲು ಬಾಕಿ ಇದೆ. ಮುಂದಿನ 4-5 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಆವರಣ ಗೋಡೆ ಕೆಲಸ ಪೂರ್ಣಗೊಂಡಿದೆ. ಆದರೆ ಕೆಲವು ಕಡೆಗಳಲ್ಲಿ ಕುಸಿದಿದ್ದು, ಇಲ್ಲಿ ಕಾಮಗಾರಿ ನಡೆಸಲು ಮಳೆ ಅಡ್ಡಿಯಾಗಿದೆ. ಆದ್ದರಿಂದ ರಿಫ್ಲೆಕ್ಟರ್‌ಗಳನ್ನು ಅಳವಡಿಸಿ, ಚಾಲಕರಿಗೆ ಸೂಚನೆ ನೀಡಲಾಗುವುದು. ಅಪಾಯದ ಸ್ಥಳದಲ್ಲಿ ಶೀಟ್ ಹಾಕಲಾಗಿದೆ ಎಂದು ಗುತ್ತಿಗೆದಾರ ಸಂಸ್ಥೆಯ ಸಫುìದ್ದೀನ್ ತಿಳಿಸಿದ್ದಾರೆ.
Related Articles
– ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ.
Advertisement