Advertisement

ಶಿರಾಡಿ 2ನೇ ಹಂತದ ಕಾಂಕ್ರೀಟೀಕರಣ; ಮುಂದಿನ ತಿಂಗಳಲ್ಲಿ ಟೆಂಡರ್‌

03:03 PM May 11, 2017 | |

ಮಂಗಳೂರು: ಶಿರಾಡಿ ಘಾಟಿ ಎರಡನೇ ಹಂತದ ಕಾಂಕ್ರೀಟೀಕರಣ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಂದಿನ ತಿಂಗಳಲ್ಲಿ ನಡೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಹೇಳಿದರು.

Advertisement

ಬುಧವಾರ ನಗರದ ಸಕೀìಟ್‌ ಹೌಸ್‌ಗೆ ಭೇಟಿ ನೀಡಿದ ಅವರು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿದರು. ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಯೋಜನೆಗೆ ಪೂರಕ ಅಂದಾಜುವೆಚ್ಚ ನಿಗದಿಪಡಿಸಲಾಗಿದ್ದು, ಮುಂದಿನ ತಿಂಗಳಲ್ಲೇ ಟೆಂಡರ್‌ ನೀಡಲಾಗುವುದು. ಅದಕ್ಕೆ ಸಂಬಂಧಪಟ್ಟ ದಾಖಲೆ ಮುಂತಾದ ಪ್ರಕ್ರಿಯೆ ನಡೆಯಲಿದೆ ಎಂದರು.

ಶಿರಾಡಿ ಘಾಟಿ ರಸ್ತೆಯ ಮೊದಲ ಹಂತದ ಕಾಮಗಾರಿ 2015ರ ಎ. 20ಕ್ಕೆ ಆರಂಭವಾಗಿ ಆಗಸ್ಟ್‌ನಲ್ಲಿ ಮುಗಿಯು ರಸ್ತೆ ಸಂಚಾರಕ್ಕೆ ಮುಕ್ತವಾಗಿತ್ತು. ಪ್ರಥಮ ಹಂತದಲ್ಲಿ 11.77 ಕಿ.ಮೀ. ಉದ್ದ ಹಾಗೂ 8.50 ಮೀ. ಅಗಲದಲ್ಲಿ ಮಾರನಹಳ್ಳಿಯಿಂದ ಅಡ್ಡಹೊಳೆಗೆ ಕಾಂಕ್ರೀಟೀಕರಣವನ್ನು ಒಟ್ಟು 69.90 ಕೋ.ರೂ. ವೆಚ್ಚದಲ್ಲಿ ಕೈಗೊಂಡು ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿತ್ತು. ಶಿರಾಡಿ ಘಾಟಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ವರೆಗೆ 13 ಕಿ.ಮೀ. ಉದ್ದದ, ಒಟ್ಟು 89 ಕೋ. ರೂ. ವೆಚ್ಚದ ದ್ವಿತೀಯ ಹಂತದ ರಸ್ತೆ ಕಾಮಗಾರಿಗೆ ಕೇಂದ್ರ ಹೆದ್ದಾರಿ ಸಚಿವಾಲಯದ ಅನುಮೋದನೆ ದೊರಕಿತ್ತಾದರೂ ನಿಗದಿತ ಸಮಯದಲ್ಲಿ ಕಾಮಗಾರಿ ಪ್ರಾರಂಭವಾಗಿರಲಿಲ್ಲ. ಈ ನಿಟ್ಟಿನಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕಾಗಿ ನೂತನ ಟೆಂಡರ್‌ ಪ್ರಕ್ರಿಯೆ ಮುಂದಿನ ತಿಂಗಳಲ್ಲಿ  ನಡೆಯಲಿದೆ.

ಹೊಸ ಮರಳು ನೀತಿ-ಸಮಿತಿ ರಚನೆ 
ಕರಾವಳಿ ಭಾಗದಲ್ಲಿ ಹೊಸ ಮರಳು ನೀತಿ ಸಂಬಂಧಿಸಿ ಸಂಪುಟದಲ್ಲಿ ಚರ್ಚೆಗಳು ನಡೆದಿವೆ. ಈ ಬಗ್ಗೆ ಸಮಿತಿ ಕೂಡ ರಚಿಸಲಾಗಿದೆ. ಮರಳು ಸಾಗಾಟ ಸಂಬಂಧಿಸಿ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೆ ತರಲು ಸಾಕಷ್ಟು ಆಗ್ರಹ ಕೇಳಿಬಂದಿದ್ದವು ಎಂದು ಸಚಿವರು ತಿಳಿಸಿದರು.

ಬಿ.ಸಿ. ರೋಡ್‌ ರಸ್ತೆ ವಿಸ್ತರಣೆ 
ಬಿ.ಸಿ. ರೋಡ್‌ನ‌ಲ್ಲಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಸಂಬಂಧಿಸಿ ಮಾತನಾಡಿದ ಸಚಿವರು, ಬಿ.ಸಿ. ರೋಡ್‌ನಿಂದ ಗುಂಡ್ಯದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಯೋಜನೆಯನ್ನು ಎಲ್‌ಎನ್‌ಟಿಗೆ ಹಸ್ತಾಂತರಿಸಲಾಗಿದೆ. ಹಾಸನ, ಸಕಲೇಶಪುರ, ಗುಂಡ್ಯ, ಬಂಟ್ವಾಳದ ವರೆಗೆ ನಡೆಸುವ ಕಾಮಗಾರಿಯಲ್ಲಿ ಸಕಲೇಶಪುರದಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next