ಬೆಂಗಳೂರು: ಬಹುಅಂಗಾಂಗ ವೈಫಲ್ಯ ಸಮಸ್ಯೆಗೆ ತುತ್ತಾಗಿ ಇಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಶಿರಾ ಕ್ಷೇತ್ರದ ಜೆಡಿ(ಎಸ್) ಶಾಸಕ ಬಿ ಸತ್ಯನಾರಾಯಣ ಅವರು ಇಂದು ರಾತ್ರಿ ನಿಧನ ಹೊಂದಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ 69 ವರ್ಷದ ಬಿ ಸತ್ಯನಾರಾಯಣ ಅವರು ನಿಧನ ಹೊಂದಿರುವ ವಿಷಯವನ್ನು ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಸತ್ಯನಾರಾಯಣ ಅವರು ಮಂಗಳವಾರ ರಾತ್ರಿ 10.45ಕ್ಕೆ ನಿಧನ ಹೊಂದಿರುವುದಾಗಿ ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.
ಬಿ ಸತ್ಯನಾರಾಯಣ ಅವರು ಶಿರಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
Related Articles
1994, 2004, 2008 ಮತ್ತು 2018 ಅವಧಿಯಲ್ಲಿ ಬಿ ಸತ್ಯನಾರಾಯಣ ಅವರು ತಮ್ಮ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಸತ್ಯನಾರಾಯಣ ಅವರ ನಿಧನಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಸಹಿತ ಹಲವಾರು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.