ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ಅಶೋಕ ನಗರ ವಾರ್ಡ್ ವ್ಯಾಪ್ತಿಗೆ ಬರುವ ಬಿಜೆಪಿ ಬೂತ್‌ನ ಅಧ್ಯಕ್ಷ ಶೇಖರ್ ಅವರು ನಾಮಫಲಕ ತಿರಸ್ಕರಿಸಿ ಸ್ಥಳದಲ್ಲೇ ರಾಜೀನಾಮೆ ನೋಡಿದ ಘಟನೆ ಬುಧವಾರ ನಡೆದಿದೆ.
ಇಂದು ಬೆಳಿಗ್ಗೆ 26ನೇ ವಾರ್ಡ್‌ನ 199ನೇ ಬೂತ್ ಅಧ್ಯಕ್ಷರಾಗಿರುವ ಶೇಖರ್ ಅವರು ಆ ವಾರ್ಡ್‌ನ ಅಧ್ಯಕ್ಷರಿಗೆ ದಿಡೀರನೇ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಘಟನೆಯಿಂದ ಬಿಜೆಪಿ ಮುಖಂಡರಲ್ಲಿ ಇರುಸು-ಮುರುಸು ಉಂಟಾಗಿದೆ. ಕಳೆದ ಕೆಲ ದಿನದಿಂದ ಬಿಜೆಪಿ ಸಚಿವರು ಶಾಸಕರು ವಾರ್ಡ್‌ನ ಅಧ್ಯಕ್ಷರುಗಳೇ ಹೋಗಿ ನಾಮಫಲಕ ವಿತರಿಸುತ್ತಿದ್ದರು.
ಇದನ್ನೂ ಓದಿ:ರಾಜ್ಯದ ಹಿತಕ್ಕೆ ಮಾರಕವಾದ ಸಮರ್ಥ ನಾಯಕತ್ವ ಕೊರತೆ : ಎಚ್.ಡಿ.ಕುಮಾರಸ್ವಾಮಿ
ಅಧಿಕಾರಕ್ಕೆ ಬರುವ ಮುಂಚೆ ಬಿಜೆಪಿಯಿಂದ ಅಭಿವೃದ್ಧಿಯ ಭರವಸೆ ನೀಡಲಾಗಿತ್ತು ಆದರೆ ಈಗ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟಕ್ಕೆ ಸಿಲುಕಿದೆ ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೂತ್ ಅಧ್ಯಕ್ಷ ಶೇಖರ್ ಹೇಳಿದರು.