Advertisement

ಶಿವಮೊಗ್ಗ: ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಪಾಲಿಕೆ ಗದ್ದುಗೆ

06:30 AM Mar 04, 2018 | Team Udayavani |

ಶಿವಮೊಗ್ಗ: ಭಾರೀ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಮಹಾನಗರ ಪಾಲಿಕೆಯ ಅಂತಿಮ ಅವಧಿಯ ಮೇಯರ್‌ ಹಾಗೂ ಉಪ ಮೇಯರ್‌ ಗದ್ದುಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಪಾಲಾಗಿದೆ.

Advertisement

ಮೇಯರ್‌ ಆಗಿ ಜೆಡಿಎಸ್‌ ಸದಸ್ಯ ನಾಗರಾಜ್‌ ಕಂಕಾರಿ ಹಾಗೂ ಉಪಮೇಯರ್‌ ಆಗಿ ಕಾಂಗ್ರೆಸ್‌ ಸದಸ್ಯೆ ವಿಜಯಲಕ್ಷ್ಮಿ ಪಾಟೀಲ್‌ ಆಯ್ಕೆಯಾಗಿದ್ದಾರೆ. ಮತ್ತೂಂದೆಡೆ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ  ಎಸ್‌. ರಾಜಶೇಖರ್‌ಗೆ ಆ ಪಕ್ಷದ ಯಾವೊಬ್ಬ ಸದಸ್ಯರು ಬೆಂಬಲ ವ್ಯಕ್ತಪಡಿಸಲಿಲ್ಲ.

ಶನಿವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬಿಸಿಎಂ (ಎ) ವರ್ಗಕ್ಕೆ ಮೀಸಲಾಗಿದ್ದ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲದೊಂದಿಗೆ ಜೆಡಿಎಸ್‌ ಸದಸ್ಯ ನಾಗರಾಜ್‌ ಕಂಕಾರಿ 25 ಮತ ಪಡೆದು ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್‌ ಸ್ಥಾನಕ್ಕೆ ಜೆಡಿಎಸ್‌ ಬೆಂಬಲದೊಂದಿಗೆ ಕಾಂಗ್ರೆಸ್‌ನ ವಿಜಯಲಕ್ಷಿ¾à ಪಾಟೀಲ್‌ 26 ಮತ ಪಡೆದು ಆಯ್ಕೆಯಾದರು. ಮೈತ್ರಿ ಕೂಟಕ್ಕೆ ಎಸ್‌ಡಿಪಿಐನ ಓರ್ವ ಹಾಗೂ ನಾಲ್ವರು ಪಕ್ಷೇತರ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಕಳೆದ ಬಾರಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ಚುಕ್ಕಾಣಿಯಲ್ಲಿ ಭಾಗಿಯಾಗಿದ್ದ ಬಿಜೆಪಿ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ವಿರೋಧ ಪಕ್ಷದ ಸಾಲಿನಲ್ಲಿ ಕೂರುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next