ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧಿಕಾರಕ್ಕಾಗಿ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಜತೆ ಬಿಜೆಪಿಯೂ ಕೈಜೋಡಿಸಿದ್ದು, ಜಿಪಂ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾಮೈತ್ರಿ ರಚನೆಯಾಗಿದೆ.
2014ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ನ ಮೂವರು, ಕಾಂಗ್ರೆಸ್‌ನ ಮೂವರು, ಬಿಜೆಪಿಯ ಓರ್ವ ಶಾಸಕರಿದ್ದರು. ಆಗ ನಡೆದ ಜಿಪಂ ಚುನಾವಣೆಯಲ್ಲಿ 31 ಸದಸ್ಯ ಬಲದ ಪಂಚಾಯತ್‌ಗೆ ಬಿಜೆಪಿಯಿಂದ 15, ಕಾಂಗ್ರೆಸ್‌ನಿಂದ 8, ಜೆಡಿಎಸ್‌ನಿಂದ 7 ಹಾಗೂ ಒಬ್ಬರು ಪಕ್ಷೇತರರು ಆಯ್ಕೆಯಾಗಿದ್ದರು.
ಸರಳ ಬಹುಮತಕ್ಕೆ 16 ಸ್ಥಾನ ಬೇಕಿತ್ತು. ಆ ವೇಳೆ ಪಕ್ಷೇತರ ಸದಸ್ಯೆ ವೇದಾ ವಿಜಯ್‌ಕುಮಾರ್ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಮೈತ್ರಿಕೂಟ ಅಧಿ ಕಾರ ಹಿಡಿಯಿತು. ಅಧ್ಯಕ್ಷರಾಗಿ ಜೆಡಿಎಸ್‌ನ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷರಾಗಿ ವೇದಾ ವಿಜಯ್‌ಕುಮಾರ್ ಅ ಧಿಕಾರ ವಹಿಸಿದ್ದರು. ಐದು ಸ್ಥಾಯಿ ಸಮಿತಿ ಸ್ಥಾನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಒಂದೊಂದು, ಉಳಿದ ಮೂರರಲ್ಲಿ ಕಾಂಗ್ರೆಸ್‌ಗೆ ಎರಡು ಹಾಗೂ ಜೆಡಿಎಸ್‌ಗೆ ಒಂದು ನೀಡಲಾಗಿತ್ತು. ಸ್ಥಾಯಿ ಸಮಿತಿ ಆಯ್ಕೆಯಲ್ಲಿ ಶಾಸಕ, ಸಚಿವ, ಎಂಎಲ್‌ಸಿ ಹಾಗೂ ಸದಸ್ಯರು ಮತ ಚಲಾಯಿಸುವ ಹಕ್ಕು ಹೊಂದಿರುವುದರಿಂದ ಹೆಚ್ಚಿನ ಸಂಖ್ಯಾಬಲ ಹೊಂದಿದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ನಿರಾತಂಕವಾಗಿ ಸ್ಥಾಯಿ ಸಮಿತಿಗಳನ್ನು ಹಂಚಿಕೊಂಡಿತ್ತು.
ಆದರೆ, 2018ರಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಗೆದ್ದಿದ್ದ ಬಿಜೆಪಿ ಸಂಖ್ಯಾಬಲ ಹೆಚ್ಚಿಸಿಕೊಂಡಿತ್ತು. 20 ತಿಂಗಳ ಸ್ಥಾಯಿ ಸಮಿತಿ ಅಧಿ ಕಾರಾವ ಧಿ ಮುಗಿದಿದ್ದ ಕಾರಣ ಮತ್ತೂಂದು ಅವ ಧಿಗೆ ಆಯ್ಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಮುಂದೂಡಲಾಗಿತ್ತು.
ಈ ಮಧ್ಯೆ, ಮುಂದಿನ ಅವಧಿಯ ಅಧಿಕಾರ ಹಂಚಿಕೆಗಾಗಿ ಬಿಜೆಪಿ ಹಾಗೂ ಮೈತ್ರಿಕೂಟದ ನಡುವೆ ಸಂಧಾನ ನಡೆದು ಹೊಸ ಸೂತ್ರಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಅದರಂತೆ ಬಾಕಿ ಇರುವ 30 ತಿಂಗಳ ಜಿಪಂ ಅಧಿ ಕಾರಾವ ಧಿಯಲ್ಲಿ 15- 15 ತಿಂಗಳ ಅವ ಧಿಗೆ ಸ್ಥಾಯಿ ಸಮಿತಿ ಹಂಚಿಕೆ ಮಾಡಿ, ಮೊದಲ ಅವ ಧಿಯಲ್ಲಿ ಬಿಜೆಪಿಗೆ 2, ಮೈತ್ರಿಕೂಟಕ್ಕೆ 1 ಹಾಗೂ ಎರಡನೇ ಅವ ಧಿಯಲ್ಲಿ ಬಿಜೆಪಿಗೆ 1, ಮೈತ್ರಿಕೂಟಕ್ಕೆ 2 ಸ್ಥಾನ ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಕೆ.ಎಸ್.ಈಶ್ವರಪ್ಪ ಸೇರಿ ಪ್ರಮುಖ ನಾಯಕರ ಸಲಹೆ ಮೇರೆಗೆ ಜಿಪಂ ಉಪಾಧ್ಯಕ್ಷೆ ವೇದಾ ಅವರ ಪತಿ ವಿಜಯ್‌ಕುಮಾರ್ ಅವರು ಈ ಸೂತ್ರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.