Advertisement

ಪತಿಯ ವಿರುದ್ಧ ರೇಗಾಡಿದ್ದ ಶಿಲ್ಪಾ?

10:56 PM Jul 27, 2021 | Team Udayavani |

ಮುಂಬಯಿ: ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ ರಾಜ್‌ ಕುಂದ್ರಾರನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೊಪ್ಪಿಸಿ ಮಂಗಳವಾರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ಹೊರಡಿಸಿದೆ.

Advertisement

ಇದೇ ವೇಳೆ, ಕಳೆದ ವಾರ ಪೊಲೀಸರು ಕುಂದ್ರಾ ನಿವಾಸಕ್ಕೆ ಬಂದಿದ್ದಾಗ, ಪತಿಯನ್ನು ಕಂಡ ಶಿಲ್ಪಾ ಶೆಟ್ಟಿ ಕಣ್ಣೀರಿಡುತ್ತಲೇ ರೇಗಾಡಿದ್ದರು ಎನ್ನಲಾಗಿದೆ. ಪತಿಯನ್ನು ನೋಡುತ್ತಲೇ ಕೂಗಾಡಿದ್ದ ಶಿಲ್ಪಾ, “ಯಾಕೆ ಹೀಗೆ ಮಾಡಿದಿರಿ? ನಮಗೆ ಎಲ್ಲವೂ ಇದೆ. ಹೀಗಿರುವಾಗ ಇಂಥ ಕೆಲಸ ಮಾಡುವ ಅಗತ್ಯವೇನಿತ್ತು? ನಮ್ಮ ಕುಟುಂಬದ ಘನತೆಗೆ ಮಸಿ ಬಳಿದಂತಾಯಿತು. ನಮ್ಮ ಭವಿಷ್ಯವೇ ಹಾಳಾಯಿತು’ ಎಂದು  ಕಣ್ಣೀರು ಹಾಕಿದ್ದರು, ಅವರನ್ನು ಪೊಲೀಸರೇ ಸಮಾಧಾನ ಪಡಿಸಿದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next