Advertisement

ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ

05:58 PM Oct 17, 2021 | Team Udayavani |

ದಾಂಡೇಲಿ: ನಗರದ ಸಮೀಪದ ಹಸನ್ಮಾಳದಲ್ಲಿರುವ ದನಗರ ಗೌಳಿ ಬುಡಕಟ್ಟು ಸಮುದಾಯವರು ದಸರಾ ಹಬ್ಬದ ನಿಮಿತ್ತ ಅನಾದಿಕಾಲದಿಂದಲೂ ಬಳುವಳಿಯಾಗಿ ಬಂದಂತಹ ಬುಡಕಟ್ಟು ಸಂಸ್ಕೃತಿಯ ಪ್ರಕಾರವಾಗಿ ದಸರಾ ಹಬ್ಬವನ್ನು ಧಾರ್ಮಿಕವಾಗಿ ಶೃದ್ದಾಭಕ್ತಿಯಿಂದ ಹಸನ್ಮಾಳದಲ್ಲಿರುವ ಯಡಗೆಯವರ ಮನೆಯಲ್ಲಿ ಹಾಗೂ ಹತ್ತಿರದ ಕಾಡಲ್ಲಿ ಆಚರಿಸಿದರು.

Advertisement

ಯಡಗೆಯವರ ಮನೆಯಲ್ಲಿ ಸ್ಥಳೀಯ ದನಗರ ಗೌಳಿ ಸಮುದಾಯದ ಪ್ರತಿಯೊಬ್ಬರು ಭಾಗವಹಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಗೌಳಿ ನೃತ್ಯದ ಮೂಲಕ ಭಗವಂತನನ್ನು ಆರಾಧಿಸಿದರು. ಆನಂತರದಲ್ಲಿ ಹತ್ತಿರದ ಕಾಡಿಗೆ ಹೋಗಿ ಮರವೊಂದಕ್ಕೆ ಪೂಜೆ ಸಲ್ಲಿಸಿ, ಅಲ್ಲಿಯೂ ದನಗರ ಗೌಳಿ ಬುಡಕಟ್ಟು ಸಂಪ್ರಾದಾಯದಂತೆ ದಸರಾ ಆಚರಣೆಯಲ್ಲಿ ನಿರತರಾದರು.

ಕಾರ್ಯಕ್ರಮದಲ್ಲಿ ದನಗರ ಗೌಳಿ ಸಮುದಾಯದ ಸಮೂಹ ನೃತ್ಯ ಎಲ್ಲರ ಗಮನ ಸೆಳೆಯಿತು. ಆಧುನಿಕತೆ ವೇಗವಾಗಿ ಬೆಳೆಯುತ್ತಿದ್ದರೂ ಪೂರ್ವಜರಿಂದ ಬಳುವಳಿಯಾಗಿ ಬಂದ ಆಚರಣೆಗಳನ್ನು ಶೃದ್ದಾಭಕ್ತಿಯಿಂದ ಹಾಗೂ ನಿಷ್ಟೆಯಿಂದ ಪಾಲಿಸಿ ತಮ್ಮ ನೆಲಮೂಲದ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಮುಂದುವರೆಸಿಕೊಂಡು ಬರುತ್ತಿರುವ ದನಗರ ಗೌಳಿ ಸಮುದಾಯದ ಸಂಪ್ರದಾಯಬದ್ದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next