Advertisement

ಶಿಡ್ಲಘಟ್ಟ: ಸ್ಮಶಾನ ಜಾಗಕ್ಕಾಗಿ-ಎರಡು ಗುಂಪುಗಳ ನಡುವೆ ಘರ್ಷಣೆ; ಶಾಂತಿ ಕಾಪಾಡಲು ಮನವಿ

08:53 PM Oct 02, 2020 | mahesh |

ಚಿಕ್ಕಬಳ್ಳಾಪುರ: ನಗರದಲ್ಲಿ ದಲಿತರಿಗೆ ಸ್ಮಶಾನಕ್ಕಾಗಿ ಜಾಗ ಮೀಸಲಿಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪು ಘರ್ಷಣೆ ನಡೆದಿದ್ದು ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Advertisement

ಜಿಲ್ಲೆಯ ಶಿಡ್ಲಘಟ್ಟ ನಗರದ ಹೊರವಲಯದಲ್ಲಿ ದಲಿತರ ಸ್ಮಶಾನಕ್ಕೆ ಹೊಂದುಕೊಂಡಿರುವ ಜಮೀನು ಮಂಜೂರು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಉಳಿದಿರುವ ಬೆನ್ನಲ್ಲಿ ದಲಿತರು ಹಾಗೂ ಮತ್ತೊಂದು ಗುಂಪಿನ ಮಧ್ಯೆ ಗಲಾಟೆಗಳು ನಡೆದಿದೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಪೋಲಿಸರು ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿ ಉದ್ರಿಕ್ತ ವಾತಾವರಣವನ್ನು ಶಮನಗೊಳಿಸಿದ್ದಾರೆ.

ದಲಿತರ ಸ್ಮಶಾನಕ್ಕೆ ಹೊಂದುಕೊಂಡಿರುವ ಜಾಗದಲ್ಲಿ ಕೆಲವರನ್ನು ದಫನ್ ಮಾಡಿದ್ದೇವೆ ಹಿಂದಿನ ತಹಶೀಲ್ದಾರ್ ಅವರು ಜಾಗವನ್ನು ಮಂಜೂರು ಮಾಡಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ ಆದರೇ ರಾಜಕುಮಾರ್ ಎಂಬುವರು ವಿನಾಕಾರಣ ತಮ್ಮ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸುತ್ತಿದ್ದಾರೆ ಜೊತೆಗೆ ಜೆಸಿಬಿ ಮೂಲಕ ಇಂದು ಹೂತ್ತಿದ್ದ ಕಳೆಬರಹಗಳನ್ನು ತೆಗೆದು ಅಪಮಾನಗೊಳಿಸಿದ್ದಾರೆ ಎಂದು ಆರೋಪಿಸಿ ದಲಿತರು ಧರಣಿ ನಡೆಸಿ ಪ್ರತಿಭಟಿಸಿದರು.

ನಮ್ಮ ಜಮೀನಿನಲ್ಲಿ ಜೆಸಿಬಿ ಮೂಲಕ ಸ್ವಚ್ಛತೆ ಕೆಲಸವನ್ನು ಮಾಡಿದ್ದೇನೆ ಯಾವುದೇ ರೀತಿಯ ಹೂತ್ತಿದ್ದ ಕಳೆಬರಹಗಳನ್ನು ತೆಗೆದಿಲ್ಲ ಅಂತಹ ಪ್ರಕರಣ ನಡೆದಿಲ್ಲ ಇಲ್ಲಸಲ್ಲದ ಕಥೆಗಳನ್ನು ಸೃಷ್ಠಿಸಿ ಅಧಿಕಾರಿಗಳನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಷಯ ತಿಳಿದ ಕೂಡಲೇ ಚಿಂತಾಮಣಿ ಉಪವಿಭಾಗದ ಡಿವೈಸ್ಪಿ ಲಕ್ಷ್ಮಯ್ಯ ಮತ್ತು ತಹಶೀಲ್ದಾರ್ ಕೆ.ಅರುಂಧತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಗೊಳಿಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ನೀಡುವ ತೀರ್ಮಾನವನ್ನು ಎಲ್ಲರು ಪಾಲಿಸಬೇಕು ಎಲ್ಲರು ಶಾಂತಿಯುತವಾಗಿರಬೇಕೆಂದು ಸೂಚನೆ ನೀಡಿದ್ದಾರೆ.

Advertisement

ಈ ಸಂದರ್ಭದಲ್ಲಿ ಸಿಪಿಐ ಸುರೇಶ್, ಗ್ರಾಮಾಂತರ ಪೋಲಿಸ್‍ಠಾಣೆಯ ಪಿಎಸ್‍ಐ ಲಿಯಾಖತ್ತುಲ್ಲಾ, ನಗರ ಪೋಲಿಸ್‍ಠಾಣೆಯ ಪಿಎಸ್‍ಐ ಸಂಗಮೇಶ್ ಮೇಟಿ,ನಗರಸಭಾ ಸದಸ್ಯ ಕೃಷ್ಣಮೂರ್ತಿ,ತಾಲೂಕು ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಮುನಿರಾಜು(ದಾಮೋದರ್),ದಲಿತ ಮುಖಂಡ ನರಸಿಂಹ(ಎನ್.ಟಿ.ಆರ್),ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next