ಹೈದರಾಬಾದ್: ಟಾಲಿವುಡ್ ನಟ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಅವರ ಎಂಗೇಜ್ ಮೆಂಟ್ ಸಮಾರಂಭ ಇದೇ ವರ್ಷದ ಜನವರಿಯಲ್ಲಿ ಗಣ್ಯರ ಸಮ್ಮುಖದಲ್ಲಿ ನೆರವೇರಿತ್ತು. ಇದೀಗ ನಟನ ಮದುವೆ ಕುರಿತು ಕೆಲವೊಂದು ನೆಗೆಟಿವ್ ಗಾಸಿಪ್ ಗಳು ಹಬ್ಬಿದೆ.
2023ರ ಜನವರಿಯಲ್ಲಿ ಟಾಲಿವುಡ್ ನಟ ಶರ್ವಾನಂದ್ ಯುಎಸ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿರುವ ಆಂಧ್ರ ಮೂಲದ ರಕ್ಷಿತಾ ರೆಡ್ಡಿ ಅವರೊಂದಿಗೆ ಎಂಗೇಜ್ ಮೆಂಟ್ ಆಗಿದ್ದರು. ಹೈದರಾಬಾದ್ ನಲ್ಲಿ ನಡೆದ ಈ ಸಮಾರಂಭದಲ್ಲಿ ನಟ ರಾಮ್ ಚರಣ್, ಅವರ ಪತ್ನಿ ಉಪಾಸನಾ ಕಾಮಿನೇನಿ, ನಟ ಸಿದ್ಧಾರ್ಥ್, ನಟಿ ಅದಿತಿ ರಾವ್ ಹೈದರಿ ಮುಂತಾದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಗೆಲುವಿನ ದಾಳ ಉರುಳಿಸಿದ್ದು… ಸಿದ್ದು, ಡಿಕೆಶಿ ಅಲ್ಲ…ಸುನಿಲ್ ಕನಗೋಲು !
ಇತ್ತೀಚೆಗೆ ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಅವರ ವಿವಾಹ ರದ್ದಾಗಿದೆ. ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಟ ಆಪ್ತ ಮೂಲಗಳು ʼಹೈದರಾಬಾದ್ ಟೈಮ್ಸ್ʼ ಗೆ ಸ್ಪಷ್ಟನೆ ನೀಡಿದೆ.
“ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಇಬ್ಬರ ಮದುವೆ ರದ್ದು ಆಗಿದೆ ಎನ್ನುವ ಸುದ್ದಿ ಸುಳ್ಳು. ಇಬ್ಬರು ಖುಷಿಯಾಗಿದ್ದಾರೆ. ಶರ್ವಾನಂದ್ ಅವರು ಶ್ರೀರಾಮ್ ಆದಿತ್ಯ ಅವರ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಲಂಡನ್ ನಲ್ಲಿ 40 ದಿನಗಳ ಶೂಟಿಂಗ್ ಮುಗಿಸಿ ಇತ್ತೀಚೆಗೆ ಭಾರತಕ್ಕೆ ಬಂದಿದ್ದಾರೆ. ಅವರು ಹೊಸ ಜೀವನಕ್ಕೆ ಕಾಲಿಡುವ ಮುನ್ನ ಸಿನಿಮಾ ಸಂಬಂಧಿತ ಕೆಲಸಗಳನ್ನು ಪೂರ್ತಿಗೊಳಿಸಲಿದ್ದಾರೆ. ಇಬ್ಬರ ಕುಟುಂಬಗಳು ಶೀಘ್ರದಲ್ಲಿ ಭೇಟಿಯಾಗಲಿದ್ದಾರೆ. ಮದುವೆ ದಿನಾಂಕವನ್ನು ನಿಗದಿ ಮಾಡಲಿದ್ದಾರೆ. ಆ ಬಳಿಕ ಅಧಿಕೃತ ಘೋಷಣೆ ಆಗಲಿದೆ” ಎಂದು ಆಪ್ತ ಮೂಲಗಳು ತಿಳಿಸಿವೆ.