Advertisement

#Daughter’s Day 2021 : ದೊಡ್ಡವಳಾದರೂ ನನ್ನ ಕಣ್ಣಿಗೆ ನೀನಿನ್ನೂ ಪುಟ್ಟ ಕಂದಮ್ಮ

01:14 PM Sep 26, 2021 | Team Udayavani |

ಇಂದು ಮಗಳ ದಿನ.. ಎಲ್ಲರು ತಮ್ಮ ತಮ್ಮ ಮುದ್ದು ಹೆಣ್ಣು ಮಕ್ಕಳಿಗೆ ಮಗಳ ದಿನದ ಶುಭಾಶಯಗಳನ್ನು ತಿಳಿಸುತ್ತಾರೆ. ಬೇರೆ ಬೇರೆ ದೇಶಗಳನ್ನು ಬೇರೆ ಬೇರೆ ದಿನದಂದು ಈ ಮಗಳ ದಿನವನ್ನು ಆಚರಿಸುತ್ತಾರೆ. ಆದ್ರೆ ಭಾರತದಲ್ಲಿ ಸೆಪ್ಟಂಬರ್ ತಿಂಗಳ ಕೊನೆಯ ಭಾನುವಾರ ಅಂದ್ರೆ 26 ರಂದು ಮಗಳ ದಿನವನ್ನು ಆಚರಿಸುತ್ತಾರೆ.

Advertisement

ಹೆತ್ತವರಿಗೆ ಹೆಣ್ಣಾಗಲಿ ಗಂಡಾಗಲಿ ಇಬ್ಬರೂ ಇಷ್ಟವೇ. ಮಗಳ ನೆನಪಿಗಾಗಿ ಈ ದಿನವನ್ನು ಆಚರಿಸಿ ಮಕ್ಕಳ ಜೊತೆ ಕಾಲ ಕಳೆಯುವ ಸುದಿನ ಇದಾಗಿದೆ. ಈ ದಿನದಂದು ಕನ್ನಡದ ನಟ ಶರಣ್ ತಮ್ಮ ಮಗಳಿಗೆ ಶುಭಾಶಯ ತಿಳಿಸಿದ್ದಾರೆ. ಟ್ವಿಟ್ಟರ್ ನಲ್ಲಿ ತಮ್ಮ ಮಗಳ ಜೊತೆಗಿನ ಫೋಟೋ ಹಾಕಿ ವಿಶ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ಶುಭಾಶಯ:

ಮಗಳು… ಪ್ರತಿ ಹೆತ್ತವರ ಪಾಲಿಗೂ ಅವರ ಬದುಕಿನ ಖುಷಿ, ಜೀವನ ಅವರಿಗೆ ನೀಡಿರುವ ಬಹುದೊಡ್ಡ ಉಡುಗೊರೆ.. ಮಗಳೇ, ನೀನೆಷ್ಟು ಬೆಳೆದು ದೊಡ್ಡವಳಾದರೂ ನನ್ನ ಕಣ್ಣಿಗೆ ನೀನಿನ್ನೂ ಪುಟ್ಟ ಕಂದಮ್ಮ.. ನನ್ನ ಜೀವನದ ಭಾಗವಾಗಿರುವುದಕ್ಕೆ ನಿನಗೆ ಮನದಾಳದ ಧನ್ಯವಾದಗಳು ಎಂದು ಬರೆದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next