ಮುಂಬೈ: ಬಾಂಬೆ ಷೇರುಪೇಟೆಯಲ್ಲಿ ಸತತ ಎರಡನೇ ದಿನವಾದ ಗುರುವಾರ ಸೂಚ್ಯಂಕ ಹೂಡಿಕೆದಾರರಿಗೆ ನಿರಾಸೆ ತಂದಿದೆ. ಬಿಎಸ್‌ಇ ಸೂಚ್ಯಂಕ 80.74 ಪಾಯಿಂಟ್ಸ್‌ಗಳಷ್ಟು ಕುಸಿತಗೊಂಡು 48,093.32ರಲ್ಲಿ, ನಿಫ್ಟಿ ಸೂಚ್ಯಂಕ 8.90ರಷುc ಕುಸಿದು 14, 137.35ರಲ್ಲಿ ದಿನಾಂತ್ಯಕ್ಕೆ ವಹಿವಾಟು ಕೊನೆಗೊಳಿಸಿದೆ. ಅಮೆರಿಕದಲ್ಲಿ ಉಂಟಾದ ರಾಜಕೀಯ ಕೋಲಾಹಲ ಷೇರುಪೇಟೆಗಳ ಮೇಲೆ ವಹಿವಾಟಿಗೆ ಧಕ್ಕೆ ತಂದಿತು. ಮಾಹಿತಿ ತಂತ್ರಜ್ಞಾನ, ಬ್ಯಾಂಕ್‌ಗಳು ಮತ್ತು ಇತರ ಕ್ಷೇತ್ರದ ಷೇರುಗಳಿಗೆ ಬೇಡಿಕೆ ಕುಸಿದಿತ್ತು. ಟೈಟನ್‌ಗೆ ಹೆಚ್ಚಿನ ರೀತಿಯಲ್ಲಿ ನಷ್ಟ ಉಂಟಾಗಿದೆ. ನಂತರದ ಸ್ಥಾನಗಳಲ್ಲಿ ನೆಸ್ಲೆ ಇಂಡಿಯಾ, ಎಚ್‌ಯುಎಲ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಐಟಿಸಿ, ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್‌ನ ಷೇರುಗಳು ವಹಿವಾಟಿನಲ್ಲಿ ಹಿನ್ನಡೆ ಅನುಭವಿಸಿದವು.
ಅಮೆರಿಕದ ಸಂಸತ್‌ನಲ್ಲಿ ಉಂಟಾದ ಗದ್ದಲ ಮತ್ತು ಹಾಲಿ ಅಧ್ಯಕ್ಷ ಟ್ರಂಪ್ ಬೆಂಬಲಿಗರು ನಡೆಸಿದ ಕೋಲಾಹಲ ಒಟ್ಟಾರೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಇದನ್ನೂ ಓದಿ:ಮಹಿಳೆಯಾಗಿ ಬದಲಾದ ಪುರುಷ ಫ್ಯಾಶನ್ ಡಿಸೈನರ್ ಶಿಂಧೆ!
ಇದೇ ವೇಳೆ ಅಮೆರಿಕದ ಡಾಲರ್ ಎದುರು ರೂಪಾಯಿ 20 ಪೈಸೆ ಕುಸಿತ ಅನುಭವಿಸಿದೆ. ದಿನದ ಮುಕ್ತಾಯದಲ್ಲಿ 73.31 ರೂ.ಗೆ ಮುಕ್ತಾಯವಾಗಿದೆ. ದಿನದ ಆರಂಭದಲ್ಲಿ 73.10 ರೂ.ಜತೆಗೆ ಮುಕ್ತಾಯವಾದ ವಹಿವಾಟು ಹಲವು ಏರಿಳಿತಕ್ಕೂ ಒಳಗಾಯಿತು.
714 ರೂ. ಕುಸಿತ: ನವದೆಹಲಿ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 714 ರೂ. ಕುಸಿದಿದೆ. ಹೀಗಾಗಿ ಪ್ರತಿ 10 ಗ್ರಾಂ ಚಿನ್ನಕ್ಕೆ 50,335 ರೂ. ಪ್ರತಿ ಕೆಜಿ ಬೆಳ್ಳಿಗೆ 386 ರೂ.ಗಳಷ್ಟು ಇಳಿಕೆಯಾಗಿ, 69,708 ರೂ.ಗೆ ತಲುಪಿದೆ.