ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ನೆಗೆಟಿವ್ ಟ್ರೆಂಡ್ ಹಾಗೂ ನಿರಂತರ ವಿದೇಶಿ ಬಂಡವಾಳದ ಹೊರಹರಿವಿನ ಪರಿಣಾಮ ಶುಕ್ರವಾರ(ಡಿಸೆಂಬರ್ 17) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳು ಕುಸಿತ ಕಂಡಿದೆ.
ಇದನ್ನೂ ಓದಿ:ಕಾಶಿಗೆ ಹೊಸ ರೂಪ ಕೊಟ್ಟಿದ್ದು ಗೋಕರ್ಣ ಮೂಲದ ನಿತಿನ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 319.82 ಅಂಕ ಇಳಿಕೆಯೊಂದಿಗೆ 57,581.32 ಅಂಕಗಳಲ್ಲಿ ಆರಂಭಿಕ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 91 ಅಂಕ ಇಳಿಕೆಯಾಗಿದ್ದು, 17,157.40 ಅಂಕಗಳ ಮಟ್ಟ ತಲುಪಿದೆ.
ಟೈಟಾನ್, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್ ಯುಎಲ್, ಮಾರುತಿ, ಏಷ್ಯನ್ ಪೇಂಟ್ಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಇನ್ಫೋಸಿಸ್, ಟಿಸಿಎಸ್, ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರ ಷೇರುಗಳು ಲಾಭಗಳಿಸಿದೆ.
ಗುರುವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 113.11 ಅಂಕಗಳಷ್ಟು ಏರಿಕೆಯೊಂದಿಗೆ 57,901.14 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ 27 ಅಂಕ ನಷ್ಟದೊಂದಿಗೆ 17,248.40 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.