ಮುಂಬಯಿ:ಹೂಡಿಕೆದಾರರ ಹಿಂಜರಿಕೆಯ ವಹಿವಾಟಿನ ಪರಿಣಾಮ ಗುರುವಾರ (ಡಿಸೆಂಬರ್ 09) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಏರಿಳಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:ವೈರಲ್ ಆಗುತ್ತಿದೆ ಕತ್ರಿನಾ ಕೈಫ್ ಮೆಹಂದಿ ಫೋಟೋ: ಅಸಲಿಯತ್ತೇನು?
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ಹಂತದಲ್ಲಿ 200ಕ್ಕೂ ಅಧಿಕ ಅಂಕಗಳಷ್ಟು ಏರಿಕೆ ಕಂಡಿದ್ದ ಬೆನ್ನಲ್ಲೇ 38.52 ಅಂಕಗಳ ಕುಸಿತದೊಂದಿಗೆ 58,611.16 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ 17.60 ಅಂಕ ಇಳಿಕೆಯಾಗಿದ್ದು, 17,452.15 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಡಾ.ರೆಡ್ಡೀಸ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಎಲ್ ಆ್ಯಂಡ್ ಟಿ, ಬಜಾಜ್ ಫೈನಾನ್ಸ್, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಎಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಸ್ಟೀಲ್, ಎನ್ ಟಿಪಿಸಿ, ಟಿಸಿಎಸ್ ಮತ್ತು ಟೈಟಾನ್ ಷೇರುಗಳು ನಷ್ಟ ಕಂಡಿದೆ. ಬುಧವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ನಾಗಲೋಟ ಕಂಡಿದ್ದು 1,016.03 ಅಂಕಗಳಷ್ಟು ಜಿಗಿತ ಕಂಡಿದ್ದು 58,649.68 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ನಿಫ್ಟಿ 293.05 ಅಂಕ ಏರಿಕೆಯೊಂದಿಗೆ 17, 469.75 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.