ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ(ಜೂನ್ 10) 160 ಅಂಕಗಳ ಏರಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.
ಇದನ್ನೂ ಓದಿ:42 ವರ್ಷ ಪ್ರಾಯದ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಗ್ಕೋ ಸಿಂಗ್ ನಿಧನ
ಮುಂಬಯಿ ಷೇರುಪೇಟೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಬಿಎಸ್ ಇ ಸಂವೇದಿ ಸೂಚ್ಯಂಕ 160.07 ಅಂಕಗಳ ಏರಿಕೆ ಕಂಡಿದ್ದು, 52,101.71 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 58.75 ಅಂಕ ಏರಿಕೆಯಾಗಿದ್ದು, 15,694.10ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಪವರ್ ಗ್ರಿಡ್, ಐಟಿಸಿ, ಟೆಕ್ ಮಹೀಂದ್ರ, ಇಂಡಸ್ ಇಂಡ್ ಬ್ಯಾಂಕ್, ಎನ್ ಟಿಪಿಸಿ, ಸನ್ ಫಾರ್ಮಾ ಮತ್ತು ಡಾ.ರೆಡ್ಡೀಸ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಬಜಾಜ್ ಆಟೋ, ಏಷ್ಯನ್ ಪೇಂಟ್ಸ್, ಮಾರುತಿ ಮತ್ತು ನೆಸ್ಲೆ ಷೇರು ನಷ್ಟ ಅನುಭವಿಸಿದೆ.
ಬುಧವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 333.93 ಅಂಕಗಳಷ್ಟು ಕುಸಿತ ಕಂಡಿದ್ದು, 51,941.64 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕೂಡಾ 104.75 ಅಂಕ ಇಳಿಕೆಯಾಗಿದ್ದು, 15,635.35ಕ್ಕೆ ತಲುಪಿತ್ತು.