ಮುಂಬಯಿ: ಷೇರುಗಳ ಮೌಲ್ಯ ಹೆಚ್ಚಳ ಹಾಗೂ ಹೂಡಿಕೆದಾರರು ಲಾಭಾಂಶವನ್ನು ಕಾಯ್ದಿರಿಸಿದ ಪರಿಣಾಮ ಗುರುವಾರ (ಸೆಪ್ಟೆಂಬರ್ 09) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಅಲ್ಪ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಯಾರಿಂದಲೂ ಬಿಜೆಪಿ ಶಕ್ತಿ ಒಡೆಯಲು ಆಗಲ್ಲ; ಸಚಿವ ಸುನೀಲ್ ಕುಮಾರ್
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 55 ಅಂಕಗಳ ಏರಿಕೆಯೊಂದಿಗೆ 58,305.07 ದಾಖಲೆಯ ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ ಕೂಡಾ 16 ಅಂಕಗಳ ಏರಿಕೆಯೊಂದಿಗೆ 17,369.25 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಏರ್ ಟೆಲ್, ನೆಸ್ಲೆ ಇಂಡಿಯಾ, ಟಿಸಿಎಸ್, , ಮೆಟಲ್, ಎಫ್ ಎಂಸಿಜಿ, ಐಟಿ ಮತ್ತು ಪಿಎಸ್ ಯು ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಖಾಸಗಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
ಜಾಗತಿಕ ಬೆಳವಣಿಗೆ ಕುರಿತ ಹೂಡಿಕೆದಾರರ ಆತಂಕ ಮತ್ತು ಸೆಂಟ್ರಲ್ ಬ್ಯಾಂಕ್ ನ ಆರ್ಥಿಕ ಪ್ಯಾಕೇಜ್ ಕಡಿತದ ಪರಿಣಾಮ ಗುರುವಾರ ಏಷ್ಯನ್ ಷೇರುಮಾರುಕಟ್ಟೆಯಲ್ಲಿನ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.