ಮುಂಬಯಿ: ಅಮೆರಿಕದ ಹಣಕಾಸು ನೀತಿ ನಿರ್ಧಾರ ಹಾಗೂ ಜಾಗತಿಕ ಷೇರುಮಾರುಕಟ್ಟೆಯ ಪಾಸಿಟಿವ್ ಟ್ರೆಂಡ್ ಪರಿಣಾಮ ಗುರುವಾರ(ಡಿಸೆಂಬರ್ 16) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸುಮಾರು 500 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:ಮುಖ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಬೇಸತ್ತು ಮಕ್ಕಳೇ ರಸ್ತೆ ಗುಂಡಿ ಮುಚ್ಚಿದರು..!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 494.12 ಅಂಕಗಳಷ್ಟು ಏರಿಕೆಯೊಂದಿಗೆ 58,282.15 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 122.15 ಅಂಕಗಳಷ್ಟು ಏರಿಕೆಯಾಗಿದ್ದು, 17,343.55 ಅಂಕಗಳ ಮಟ್ಟ ತಲುಪಿದೆ.
ಇನ್ಫೋಸಿಸ್, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಮಾರುತಿ, ಸನ್ ಫಾರ್ಮಾ, ಎಚ್ ಯುಎಲ್ ಮತ್ತು ಐಟಿಸಿ ಷೇರುಗಳು ನಷ್ಟ ಕಂಡಿದೆ.
ಬುಧವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 329.06 ಅಂಕಗಳಷ್ಟು ಇಳಿಕೆಯೊಂದಿಗೆ 57,788.03 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 103.50 ಅಂಕ ಕುಸಿತಗೊಂಡಿದ್ದು, 17,221.40 ರ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತ್ತು.