ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ದುರ್ಬಲ ವಹಿವಾಟಿನ ಪರಿಣಾಮ ಸೋಮವಾರ (ಸೆಪ್ಟೆಂಬರ್ 20) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಭಾರೀ ಕುಸಿತ ಕಾಣುವ ಮೂಲಕ ದಿನಾಂತ್ಯದ ವಹಿವಾಟನ್ನು ಕೊನೆಗೊಳಿಸಿದೆ.
ಇದನ್ನೂ ಓದಿ:ಮೈಸೂರು: ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 490 ಅಂಕ ಕುಸಿತ ಕಂಡಿದ್ದು, 58,525 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 204 ಅಂಕ ಕುಸಿದಿದ್ದು, 17,425 ಅಂಕಗಳ ಮಟ್ಟ ತಲುಪಿದೆ.
ಮಧ್ಯಂತರ ವಹಿವಾಟಿನ ವೇಳೆ ಹೂಡಿಕೆದಾರರು ಲಾಭ ಪಡೆಯುವಂತಾಗಿದ್ದು, ಸುಮಾರು 200 ಅಂಕ ಏರಿಕೆಯೊಂದಿಗೆ ಸೆನ್ಸೆಕ್ಸ್ 59 ಸಾವಿರದ ಗಡಿ ದಾಟಿತ್ತು. ಏತನ್ಮಧ್ಯೆ ಷೇರು ಮಾರಾಟದ ಒತ್ತಡದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಮತ್ತೆ ಕುಸಿತ ಕಂಡಿತ್ತು.
ಟಾಟಾ ಸ್ಟೀಲ್, ಎಚ್ ಡಿಎಫ್ ಸಿ, ಎಸ್ ಬಿಐ, ಹಿಂದೂಸ್ತಾನ್ ಯೂನಿಲಿವರ್ ಹಾಗೂ ಐಟಿಸಿ ಷೇರುಗಳ ಬಿರುಸಿನ ಮಾರಾಟದ ಪರಿಣಾಮ ಮಧ್ಯಾಹ್ನ 3.22ಕ್ಕೆ ಸೆನ್ಸೆಕ್ಸ್ 535 ಅಂಕಗಳಷ್ಟು ಕುಸಿತ ಕಂಡು, 58,480 ಅಂಕಗಳಿಗೆ ಕುಸಿದಿತ್ತು.
ಎಚ್ ಯುಎಲ್, ಒಎನ್ ಜಿಸಿ, ಐಟಿಸಿ, ಎಚ್ ಸಿಎಲ್ ಷೇರುಗಳು ಭಾರೀ ಲಾಭಗಳಿಸಿವೆ. ಮತ್ತೊಂದೆಡೆ ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಹಿಂಡಲ್ಕೋ, ಅದಾನಿ ಷೇರುಗಳು ನಷ್ಟ ಕಂಡಿವೆ.