ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಮಿಶ್ರ ವಹಿವಾಟಿನ ಪರಿಣಾಮ ಶುಕ್ರವಾರ(ಜುಲೈ 16) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ 2021: ಒಂದೇ ಗುಂಪಿನಲ್ಲಿ ಸ್ಥಾನ ಪಡೆದ ಭಾರತ ಮತ್ತು ಪಾಕಿಸ್ಥಾನ ತಂಡಗಳು
ಇಂದು ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ದಾಖಲೆಯ 53,290.81 ಅಂಕಗಳ ವಹಿವಾಟು ನಡೆಸಿದ್ದು, ಸಂಜೆ ಬಿಎಸ್ ಇ ಸೂಚ್ಯಂಕ 18.79 ಅಂಕ ಇಳಿಕೆಯಾಗಿದ್ದು, 53,140.06 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ.
ಎನ್ ಎಸ್ ಇ ನಿಫ್ಟಿ 0.80 ಅಂಕ ಕುಸಿದಿದ್ದು, 15, 923.40ರ ಗಡಿ ದಾಟಿದೆ. ಎಚ್ ಸಿಎಲ್, ಇನ್ಫೋಸಿಸ್, ಬಜಾಜ್ ಫಿನ್ ಸರ್ವ್, ಎನ್ ಪಿಸಿ, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.
ಭಾರ್ತಿ ಏರ್ ಟೆಲ್, ಆಲ್ಟ್ರಾ ಟೆಕ್ ಸಿಮೆಂಟ್, ಟಾಟಾ ಸ್ಟೀಲ್ ಹಾಗೂ ಪವರ್ ಗ್ರಿಡ್ ಸಂಸ್ಥೆಗಳ ಷೇರುಗಳು ಲಾಭಗಳಿಸಿದೆ. ಇತ್ತೀಚೆಗೆ ಐಟಿ ಷೇರುಗಳು ತೀವ್ರ ಏರಿಕೆಗೆ ಸಾಕ್ಷಿಯಾದ ಹಿನ್ನೆಲೆಯಲ್ಲಿ ಲಾಭಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಯ್ದಿರಿಸಿದ ಪರಿಣಾಮ ನಿಫ್ಟಿ ಇಳಿಕೆಯಾಗಲು ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.