ಮುಂಬಯಿ: ಅಮೆರಿಕದ ಫೆಡರಲ್ ರಿಸರ್ವ್ ದರವನ್ನು ಏರಿಕೆ ಮಾಡಿರುವ ನಡುವೆಯೂ ಗುರುವಾರ (ಮಾರ್ಚ್ 17) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,000ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಗೆಳೆಯರ ಜತೆ Netflix password ಹಂಚಿಕೊಂಡಿದ್ದೀರಾ?ಇನ್ಮುಂದೆ ಹೆಚ್ಚುವರಿ ಶುಲ್ಕ ಪಾವತಿಸಬೇಕು
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1,047.28 ಅಂಕಗಳಷ್ಟು ಏರಿಕೆಯಾಗಿದ್ದು, 57,863.93 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 311.70 ಅಂಕಗಳಷ್ಟು ಏರಿಕೆಯೊಂದಿಗೆ 17,287.05 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಎಚ್ ಡಿಎಫ್ ಸಿ ಷೇರು ಶೇ.5.50ರಷ್ಟು ಲಾಭಗಳಿಸಿದ್ದು, ಟೈಟಾನ್, ರಿಲಯನ್ಸ್, ಕೋಟಕ್ ಬ್ಯಾಂಕ್, ಏಷಿಯನ್ ಪೇಂಟ್ಸ್, ಸನ್ ಫಾರ್ಮಾ ಮತ್ತು ಟಾಟಾ ಸ್ಟೀಲ್ ಷೇರುಗಳೂ ಲಾಭಗಳಿಸಿದೆ. ಮತ್ತೊಂದೆಡೆ ಇನ್ಫೋಸಿಸ್, ಎಚ್ ಸಿಎಲ್ ಟೆಕ್ ಷೇರುಗಳು ನಷ್ಟ ಕಂಡಿದೆ
ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಟೋಕಿಯೊ, ಸಿಯೋಲ್, ಹಾಂಗ್ ಕಾಂಗ್ ಮತ್ತು ಶಾಂಘೈ ಷೇರುಪೇಟೆ ಸೆನ್ಸೆಕ್ಸ್ ವಹಿವಾಟು ಲಾಭದೊಂದಿಗೆ ಮುಕ್ತಾಯಗೊಂಡಿದೆ. ಯುರೋಪ್ ಮಾರುಕಟ್ಟೆಯಲ್ಲಿ ಮಧ್ಯಂತರ ವಹಿವಾಟಿನಲ್ಲಿ ಮಿಶ್ರ ವಹಿವಾಟು ನಡೆದಿತ್ತು.