ಮುಂಬಯಿ:ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರ(ಆಗಸ್ಟ್ 04) 546 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಒಲಿಂಪಿಕ್ಸ್; ಸೆಮಿಫೈನಲ್ ಕಾದಾಟ-ಭಾರತದ ವನಿತೆಯರ ತಂಡಕ್ಕೆ ಸೋಲು, ಕಂಚಿನ ಪದಕಕ್ಕೆ ಸೆಣಸಾಟ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 546 ಅಂಕಗಳ ಏರಿಕೆಯೊಂದಿಗೆ 54,370 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 128 ಅಂಕಗಳಷ್ಟು ಜಿಗಿತದೊಂದಿಗೆ ದಾಖಲೆಯ 16,258ರ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಡಿಎಫ್ ಸಿ, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ಶೇ.4.77ರಷ್ಟು ಲಾಭಗಳಿಸಿದೆ. ಮತ್ತೊಂದೆಡೆ ಟೈಟಾನ್, ನೆಸ್ಲೆ ಇಂಡಿಯಾ, ಆಲ್ಟ್ರಾ ಸೆಮ್ಕೊ, ಸನ್ ಫಾರ್ಮಾ, ಮಾರುತಿ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ನಷ್ಟ ಕಂಡಿದೆ.
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರದ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 54,000 ಅಂಕಗಳ ಗಡಿಯನ್ನು ತಲುಪಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 116.10 ಅಂಕಗಳ ಏರಿಕೆಯೊಂದಿಗೆ 16,246,85 ಅಂಕಗಳ ಗಡಿ ಮುಟ್ಟಿತ್ತು.