ಮುಂಬಯಿ: ಸತತ ಇಳಿಕೆ ಕಂಡಿದ್ದ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಗುರುವಾರ (ಜುಲೈ 29) 209 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಇದರಿಂದ ಟಾಟಾ ಸ್ಟೀಲ್, ಎಸ್ ಬಿಐ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:ರಾಜ್ ಕುಂದ್ರಾ ‘ಕಾಮ’ ಕಾಂಡ ಬಿಚ್ಚಿಟ್ಟ ನಟಿ ಶೆರ್ಲಿನ್ ಚೋಪ್ರಾ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 209.36 ಅಂಕಗಳಷ್ಟು ಏರಿಕೆಯೊಂದಿಗೆ 52,653,07 ಅಂಕಗಳೊಂದಿಗೆ ದಿನದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 69.05 ಅಂಕ ಏರಿಕೆಯೊಂದಿಗೆ 15,778.45ರ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಎಸ್ ಬಿಐ, ಎಚ್ ಸಿಎಲ್ ಟೆಕ್, ಸನ್ ಫಾರ್ಮಾ, ಬಜಾಜ್ ಫೈನಾನ್ಸ್ ಮತ್ತು ರಿಲಯನ್ಸ್ ಇಂಡಿಸ್ಟ್ರೀಸ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಮಾರುತಿ, ಪವರ್ ಗ್ರಿಡ್, ಬಜಾಜ್ ಆಟೋ ಮತ್ತು ಐಟಿಸಿ ಷೇರುಗಳು ನಷ್ಟ ಅನುಭವಿಸಿದೆ.
ಜಾಗತಿಕ ಷೇರುಪೇಟೆಯ ಧನಾತ್ಮಕ ವಹಿವಾಟಿನ ಪರಿಣಾಮ ದೇಶೀ ಈಕ್ವಿಟಿ ಮಾರಾಟ ಚೇತರಿಸಿಕೊಂಡ ನಿಟ್ಟಿನಲ್ಲಿ ಮೆಟಲ್ ಮತ್ತು ಐಟಿ ಷೇರುಗಳು ಭರ್ಜರಿಯಾಗಿ ಮಾರಾಟ ಕಂಡಿದ್ದು, ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್ ನ ಬಿನೋದ್ ಮೋದಿ ತಿಳಿಸಿದ್ದಾರೆ.