Advertisement

ಕೋವಿಡ್ ಲಾಕ್ ಡೌನ್ ಕಳವಳ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 84 ಅಂಕ ಏರಿಕೆ

04:54 PM Apr 08, 2021 | Team Udayavani |

ಮುಂಬಯಿ: ಕೋವಿಡ್ ಸೋಂಕು ಪ್ರಕರಣದ ಹೆಚ್ಚಳದಿಂದ ದೇಶದ ಹಲವೆಡೆ ಕಠಿಣ ನಿರ್ಬಂಧ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ವಹಿವಾಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸದ ಪರಿಣಾಮ ಗುರುವಾರ(ಏ.8) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಕೇವಲ 84 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ.

Advertisement

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 84.45ಅಂಕ ಏರಿಕೆಯಾಗಿದ್ದು, 49,746/21 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 54.75 ಅಂಕ ಏರಿಕೆಯಾಗಿದ್ದು, 14,873.80ರ ಗಡಿ ತಲುಪಿದೆ.

ಆಲ್ಟ್ರಾ ಟೆಕ್ ಸಿಮೆಂಟ್, ಟೈಟಾನ್, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ, ಟಿಸಿಎಸ್, ಬಜಾಜ್ ಫಿನ್ ಸರ್ವ್ ಮತ್ತು ಎಲ್ ಆ್ಯಂಡ್ ಟಿ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಇಂಡಸ್ ಇಂಡ್ ಬ್ಯಾಂಕ್, ಒಎನ್ ಜಿಸಿ, ಸನ್ ಫಾರ್ಮಾ, ಎಚ್ ಡಿಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.

ಮುಂಬೈ ಸೇರಿದಂತೆ ಶಾಂಘಾಯೈ, ಹಾಂಗ್ ಕಾಂಗ್, ಸಿಯೋಲ್ ಷೇರು ಮಾರುಕಟ್ಟೆಯಲ್ಲಿಯೂ ವಹಿವಾಟು ಚೇತರಿಕೆ ಕಂಡಿದೆ. ಯುರೋಪ್ ಷೇರುಮಾರುಕಟ್ಟೆ ಭರ್ಜರಿ ವಹಿವಾಟು ನಡೆಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next