ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದ ಪರಿಣಾಮ ಶುಕ್ರವಾರ(ಆಗಸ್ಟ್ 06) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 215 ಅಂಕಗಳಷ್ಟು ಕುಸಿತ ಕಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ, ಮತ್ತು ಎಸ್ ಬಿಐ ಷೇರುಗಳು ನಷ್ಟ ಅನುಭವಿಸಿದೆ.
ಇದನ್ನೂ ಓದಿ:ವರ್ಕ್ ಫ್ರಮ್ ಹೋಮ್ ಒತ್ತಡ ನಿವಾರಿಸುವ ತನುಮನಕ್ಕೆ ಮಾರಕವಾಗದಿರಲಿ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 215.12 ಅಂಕ ಇಳಿಕೆಯಾಗಿದ್ದು, 54,277.72 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಇದೇ ರೀತಿ ಎನ್ ಎಸ್ ಇ ನಿಫ್ಟಿ 56.40 ಅಂಕ ಕುಸಿತವಾಗಿದ್ದು, 16,282.20ರ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಇಳಿಕೆಯಿಂದ ರಿಲಯನ್ಸ್ ಇಂಡಸ್ಟ್ರೀಸ್, ಆಲ್ಟ್ರಾಟೆಕ್ ಸಿಮೆಂಟ್, ಎಸ್ ಬಿಐ, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಏತನ್ಮಧ್ಯೆ ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಟೆಕ್ ಮಹೀಂದ್ರಾ, ಮಾರುತಿ, ಎನ್ ಟಿಪಿಸಿ ಮತ್ತು ಬಜಾಜ್ ಆಟೋ ಷೇರುಗಳು ಲಾಭಗಳಿಸಿದೆ.
ಗುರುವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 54,717.34ರ ಸಾರ್ವಕಾಲಿಕ ಜಿಗಿತ ಕಂಡಿದ್ದು, ದಿನಾಂತ್ಯಕ್ಕೆ 123.07 ಅಂಕ ಏರಿಕೆಯೊಂದಿಗೆ ದಾಖಲೆಯ 54,492.84ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಇದೇ ರೀತಿ ನಿಫ್ಟಿ ಕೂಡಾ 35.80 ಅಂಕಗಳಷ್ಟು ಏರಿಕೆ ಕಂಡು, 16,294.60ರಲ್ಲಿ ವಹಿವಾಟು ಕೊನೆಗೊಳಿಸಿತ್ತು.