ಮುಂಬಯಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ(ಜೂನ್ 14)ದ ಆರಂಭಿಕ ವಹಿವಾಟಿನಲ್ಲಿ 188 ಅಂಕಗಳಷ್ಟು ಇಳಿಕೆ ಕಂಡಿದ್ದು, ಇದರಿಂದ ಐಸಿಐಸಿಐ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.
ಇದನ್ನೂ ಓದಿ:ತುಂಗಾ ಜಲಾಯಶದ 21 ಕ್ರಸ್ಟ್ ಗೇಟ್ ಗಳ ತೆರವು: 2020 ಕ್ಯೂಸೆಕ್ಸ್ ನೀರು ಬಿಡುಗಡೆ
ಮುಂಬಯಿ ಷೇರುಪೇಟೆಯ ಬಿಎಸ್ ಇ ಸಂವೇದಿ ಸೂಚ್ಯಂಕ 188.89 ಅಂಕ ಇಳಿಕೆಯಾಗಿದ್ದು, 52,285.87 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 80.65 ಅಂಕ ಇಳಿಕೆಯಾಗಿದ್ದು, 15,718.70ರ ಗಡಿ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಎನ್ ಟಿಪಿಸಿ, ಎಸ್ ಬಿಐ ಬ್ಯಾಂಕ್, ಕೋಟಕ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಡಾ.ರೆಡ್ಡೀಸ್, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ. ಅಲ್ಲದೇ ಇನ್ಫೋಸಿಸ್, ರಿಲಯನ್ಸ್, ಟಿಸಿಎಸ್, ಬಜಾಜ್ ಆಟೋ, ಒಎನ್ ಜಿಸಿ ಷೇರುಗಳು ಲಾಭಗಳಿಸಿದೆ.
ಶುಕ್ರವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 174.29 ಅಂಕ ಏರಿಕೆಯಾಗಿದ್ದು, 52,474.76 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ 61.60 ಅಂಕ ಏರಿಕೆಯೊಂದಿಗೆ 15,799.35ರ ಗಡಿ ದಾಟಿತ್ತು.