ಮುಂಬಯಿ: ವಿದೇಶಿ ಬಂಡವಾಳದ ಹೊರಹರಿವಿನ ನಡುವೆ ಶುಕ್ರವಾರ(ಜುಲೈ23) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 100 ಅಂಕಗಳಷ್ಟು ಕುಸಿತ ಕಂಡಿದೆ. ಇದರಿಂದಾಗಿ ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಪ್ರವಾಹ : ಮಾರ್ಕಂಡೇಯ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ 150 ಅಂಕ ಏರಿಕೆ ಕಂಡಿದ್ದು, ನಂತರ ಸಂವೇದಿ ಸೂಚ್ಯಂಕ 141.67 ಅಂಕ ಇಳಿಕೆಯಾಗಿದ್ದು, 52,695.54 ಅಂಕಗಳೊಂದಿಗೆ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 42.05 ಅಂಕ ಕುಸಿತವಾಗಿದ್ದು, 15,782ರ ಗಡಿ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಎಲ್ ಆ್ಯಂಡ್ ಟಿ, ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ. ಏತನ್ಮಧ್ಯೆ ಎಚ್ ಸಿಎಲ್ ಟೆಕ್, ಆಲ್ಟ್ರಾ ಟೆಕ್ ಸಿಮೆಂಟ್, ಟಾಟಾ ಸ್ಟೀಲ್, ಟೈಟಾನ್ ಮತ್ತು ಮಾರುತಿ ಷೇರುಗಳು ಲಾಭಗಳಿಸಿದೆ.
ಮುಂಬಯಿ ಷೇರುಪೇಟೆಯ ಹಿಂದಿನ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 638.70 ಅಂಕ ಏರಿಕೆಯಾಗಿದ್ದು, 52,837 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಕೂಡಾ 191.95 ಅಂಕ ಏರಿಕೆಯಾಗಿದ್ದು, 15,824.05 ಅಂಕಗಳ ಗಡಿ ತಲುಪಿತ್ತು.