Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 355 ಅಂಕ ಇಳಿಕೆ, 15,650ಕ್ಕೆ ಕುಸಿದ ನಿಫ್ಟಿ

12:05 PM Jul 21, 2021 | Team Udayavani |

ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟಿನ ಪರಿಣಾಮ ಬುಧವಾರ(ಜುಲೈ 21) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 355 ಅಂಕ ಕುಸಿತ ಕಂಡಿದೆ. ಇದರಿಂದ ಎಚ್ ಡಿಎಫ್ ಸಿ ಷೇರುಗಳು ಭಾರೀ ನಷ್ಟ ಅನುಭವಿಸಿದೆ.

Advertisement

ಇದನ್ನೂ ಓದಿ:ಹಿಂಸಾಚಾರದ ವಿರುದ್ಧ ನಾಳೆ ರಾಜ್ ಘಾಟ್ ನಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಭಟನೆ : ಘೋಷ್

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 354.89 ಅಂಕ ಇಳಿಕೆಯಾಗಿದ್ದು, 52,198.51 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 120.30 ಅಂಕ ಕುಸಿತ ಕಂಡಿದ್ದು, 15,632.10ರ ಗಡಿ ತಲುಪಿದೆ.

ಸೆನ್ಸೆಕ್ಸ್ ನಷ್ಟದಿಂದ ಇಂಡಸ್ ಇಂಡ್ ಬ್ಯಾಂಕ, ಟಾಟಾ ಸ್ಟೀಲ್, ಎನ್ ಟಿಪಿಸಿ, ಭಾರ್ತಿ ಏರ್ ಟೆಲ್, ಎಚ್ ಸಿಎಲ್ ಟೆಕ್, ಐಸಿಐಸಿಐ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರಾ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.

ಮತ್ತೊಂದೆಡೆ ಏಷ್ಯನ್ ಪೇಂಟ್ಸ್, ಆಲ್ಟ್ರಾ ಟೆಕ್ ಸಿಮೆಂಟ್, ಬಜಾಜ್ ಆಟೋ, ಎಚ್ ಯುಎಲ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಲಾಭಗಳಿಸಿದೆ. ಜಾಗತಿಕ ವಹಿವಾಟು ನಷ್ಟ ಅನುಭವಿಸಿದ ಪರಿಣಾಮ ದೇಶೀಯ ಈಕ್ವಿಟಿ ಮಾರಾಟ ಕೂಡಾ ನಷ್ಟ ಕಂಡಿದೆ ಎಂದು ಬಿನೋದ್ ಮೋದಿ ವಿಶ್ಲೇಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next