ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯ ಮಿಶ್ರವಹಿವಾಟು ಹಾಗೂ ಖಾಸಗಿ ವಲಯದ ಬ್ಯಾಂಕ್ ಗಳ ಹಾಗೂ ಫೈನಾಶ್ಶಿಯಲ್ ಷೇರುಗಳ ಮಾರಾಟದ ಪರಿಣಾಮ ಸೋಮವಾರ (ಫೆ.07) ಮಧ್ಯಾಹ್ನ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಬರೋಬ್ಬರಿ 1,300ಕ್ಕೂ ಅಧಿಕ ಅಂಕಗಳು ಪತನಗೊಂಡಿದೆ.
ಇದನ್ನೂ ಓದಿ:ಹಿಜಾಬ್ ವಿವಾದದ ಹಿಂದೆ ಯಾವುದೋ ಕಾಣದ ಶಕ್ತಿ ಕೆಲಸ ಮಾಡುತ್ತಿದೆ: ಆರಗ ಜ್ಞಾನೇಂದ್ರ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,325 ಅಂಕಗಳಷ್ಟು ಇಳಿಕೆಯಾಗಿದ್ದು, 57,320 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 378 ಅಂಕಗಳಷ್ಟು ಕುಸಿತ ಕಂಡಿದ್ದು, 17,138 ಅಂಕಗಳಿಗೆ ಇಳಿಕೆಯಾಗಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ಷೇರು ಶೇ.3.97ರಷ್ಟು ನಷ್ಟ ಕಂಡಿದೆ. ಇನ್ನುಳಿದಂತೆ ಎಚ್ ಡಿಎಫ್ ಸಿ ಲೈಳ್, ಎಲ್ ಆ್ಯಂಡ್ ಟಿ, ಬಜಾಜ್ ಫೈನಾನ್ಸ್ ಮತ್ತು ಎಸ್ ಬಿಐ ಲೈಫ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಒಎನ್ ಜಿಸಿ, ಪವರ್ ಗ್ರಿಡ್, ಟಾಟಾ ಸ್ಟೀಲ್, ಎನ್ ಟಿಪಿಸಿ ಮತ್ತು ಎಸ್ ಬಿಐ ಷೇರುಗಳು ಲಾಭಗಳಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 225.04 ಅಂಕ ಕುಸಿದಿದ್ದು, 58,419.78 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 69.55 ಅಂಕ ಇಳಿಕೆಯಾಗಿದ್ದು, 17,446.75 ಅಂಕಗಳಲ್ಲಿ ವಹಿವಾಟು ನಡೆಸಿತ್ತು.