ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಸೋಮವಾರ (ಜನವರಿ 24) ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ ಬರೋಬ್ಬರಿ 1,950 ಅಂಕಗಳಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:ನನ್ನನ್ನ ಸಂಪುಟದಿಂದ ಕೈಬಿಟ್ರೂ ಪಕ್ಷದ ಪರ ಕೆಲಸ ಮಾಡುತ್ತೇನೆ: ಸಚಿವ ಬೈರತಿ ಬಸವರಾಜ್
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಇಂದು ಮಧ್ಯಾಹ್ನದ ವಹಿವಾಟಿನ ವೇಳೆ ಸೆನ್ಸೆಕ್ಸ್ 1950.05 ಅಂಕಗಳಷ್ಟು ಕುಸಿದಿದ್ದು, 57,082 ಅಂಕಗಳಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 596 ಅಂಕ ಇಳಿಕೆಯಾಗಿದ್ದು, 17,021ಅಂಕಗಳ ಮಟ್ಟಕ್ಕೆ ಕುಸಿತ ಕಂಡಿದೆ.
ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಹಿನ್ನೆಲೆಯಲ್ಲಿ ಆರಂಭಿಕವಾಗಿ ಸೆನ್ಸೆಕ್ಸ್ ಇಳಿಕೆಯಾಗಿದ್ದು, ಷೇರುಪೇಟೆಯ ಟ್ರೆಂಡ್ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದ್ದಿರುವುದಾಗಿ ಗ್ಲೋಬಲ್ ರಿಸರ್ಚ್ ಲಿಮಿಟೆಡ್ ನ ಗೌರವ್ ಗರ್ಗ್ ವಿಶ್ಲೇಷಿಸಿದ್ದಾರೆ.
ಜೆಎಸ್ ಡಬ್ಲ್ಯು ಸ್ಟೀಲ್, ಟೆಕ್ ಮಹೀಂದ್ರ, ಟಾಟಾ ಸ್ಟೀಲ್ ಮತ್ತು ವಿಪ್ರೋ ಷೇರುಗಳು ನಷ್ಟ ಕಂಡಿದೆ. ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಟೈಟಾನ್, ಬಜಾಜ್ ಫಿನ್ ಸರ್ವ್, ಏಷ್ಯನ್ ಪೇಂಟ್ಸ್ ಷೇರುಗಳ ಮೌಲ್ಯ ಭಾರೀ ಇಳಿಕೆ ಕಂಡಿದೆ.
ಶುಕ್ರವಾರ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 427 ಅಂಕಗಳಷ್ಟು ಕುಸಿತ ಕಂಡಿದ್ದು, 59,037 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯ ಕಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 140 ಅಂಕ ಇಳಿಕೆಯಾಗಿದ್ದು, 17, 617 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.