ನವದೆಹಲಿ: ಐಪಿಎಲ್ ಮುಗಿದ ಮೇಲೆ ಸುದೀರ್ಘ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಲಿರುವ ಭಾರತ ಕ್ರಿಕೆಟ್ ತಂಡದಾಯ್ಕೆ ಈ ವಾರಾಂತ್ಯದಲ್ಲಿ ನಡೆಯಲಿದೆ. ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ನಾಲ್ಕು ಟೆಸ್ಟ್ ಹಾಗೂ ಟಿ20, ಏಕದಿನ ಸರಣಿಗೆ ದೊಡ್ಡ ತಂಡವನ್ನು ಆಯ್ಕೆ ಮಾಡಲಿದೆ.
ಈ ಪೈಕಿ ಟೆಸ್ಟ್ ತಂಡದ 5ನೇ ಬೌಲರ್ ಸ್ಥಾನಕ್ಕಾಗಿ ಹೈದರಾಬಾದ್‌ನ ಮೊಹಮ್ಮದ್ ಸಿರಾಜ್ ಹಾಗೂ ಮುಂಬೈ ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಇಬ್ಬರು ಹಿರಿಯ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ ಗಾಯಾಳಾಗಿರುವುದರಿಂದ ಬಹುತೇಕ ಕೂಟದಿಂದ ಹೊರ ನಡೆದಿದ್ದಾರೆ. ಅವರ ಜಾಗದಲ್ಲಿ ನವದೀಪ್ ಸೈನಿ ಆಯ್ಕೆಯಾಗಲಿದ್ದಾರೆ. ಇನ್ನುಳಿದ ಮೂರು ಸ್ಥಾನ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್‌ಗೆ ಲಭಿಸಲಿದೆ.
ಇದನ್ನೂ ಓದಿ:ಮುಂದಿನ ವರ್ಷ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್‌ನಲ್ಲಿ ಡೇ ನೈಟ್ ಟೆಸ್ಟ್
ಅದಲ್ಲದೆ ಈ ಐಪಿಎಲ್ ನಲ್ಲಿ ಅಗ್ರ ರನ್ ಸ್ಕೋರರ್ ಆಗಿರುವ ಕೆ ಎಲ್ ರಾಹುಲ್ ಕೂಡಾ ಟೆಸ್ಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಐಪಿಎಲ್ ಮುಗಿದ ಬಳಿಕ ಭಾರತ ತಂಡ ನೇರವಾಗಿ ಕಾಂಗರೂ ನೆಲಕ್ಕೆ ಪ್ರಯಾಣ ಮಾಡಲಿದೆ. ಡಿಸೆಂಬರ್ 3ರಂದು ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಒಟ್ಟು ನಾಲ್ಕು ಟೆಸ್ಟ್ ಪಂದ್ಯ, ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಒಂದು ಟೆಸ್ಟ್ ಪಂದ್ಯ ಹಗಲು ರಾತ್ರಿ ಪಂದ್ಯವಾಗಿರಲಿದೆ.