Advertisement

ಗ್ಲಾಮರ್‌ ಸ್ಪರ್ಶಕ್ಕೆ ಸೋಲೂ ಲೆಕ್ಕಕ್ಕಿಲ್ಲ!

11:07 AM Jun 02, 2018 | |

ಟೆನಿಸ್‌ ಅಂಗಳದಲ್ಲಿ ಸುಮ್ಮನೆ ಓಡಾಡಿದರೂ ಸುದ್ದಿಯಾಗುವ ಆಟಗಾರ್ತಿ ಮಾರಿಯಾ ಶರಪೋವಾ. ಆಟವನ್ನಲ್ಲ: ಕೇವಲ ಆಕೆಯ ಸೌಂದರ್ಯವನ್ನು ನೋಡಲೆಂದೇ ಟೆನಿಸ್‌ ವೀಕ್ಷಿಸುವವರ ಸಂಖ್ಯೆ ಹೆಚ್ಚಿದೆ. ಇಂಥ ಬೆಡಗಿ, ಈಗ ಮತ್ತೆ ಗೆಲುವಿನ ಆಸೆಯೊಂದಿಗೆ ಅಂಗಳಕ್ಕೆ ಬಂದಿದ್ದಾಳೆ….   

Advertisement

ರಷ್ಯಾದ ಮಾರಿಯಾ ಶರಪೋವಾ ಮಾದರಿಯ ಆಟಗಾರರಿಗೆ ಟೆನಿಸ್‌ ಪ್ರಪಂಚದಲ್ಲಿ ವಿಶೇಷ ಸ್ಥಾನವಿದೆ. ಅವರು ಮಾತ್ರ ಗೆದ್ದರೆ ಮಾತ್ರ ಸುದ್ದಿಯಲ್ಲಿರುವಂತಹ ಶ್ರೇಣಿಯವರಲ್ಲ. ಆಡಿದರೆ ಸಾಕು, ಬಾಯ್ಬಿಟ್ಟರೆ ಆಹಾ, ಕೊನೆಗೆ ಕಣ್ಣಿಗೆ ಬಿದ್ದರೂ ಅವರು ಸುದ್ದಿಗೆ ಆಹಾರ. ಮೊನ್ನೆ ಮೊನ್ನೆ ಅವರ ಉಂಗುರ ಬೆರಳು ಫೋಟೋಗಳಿಗೆ ಸರಕಾಗಿತ್ತು. ಅವರು ತಮ್ಮ ರಿಂಗ್‌ ಬೆರಳಿನಲ್ಲಿ ಉಂಗುರ ತೊಟ್ಟದ್ದು, ಸೆನ್ಸೇಶನ್‌ ಸುದ್ದಿಯಾಗಿತ್ತು! ಯಾರು ತೊಡಿಸಿರಬಹುದು ಆ ಉಂಗುರವನ್ನು ಆಕೆ ಈಗ ಡೇಟಿಂಗ್‌ ನಡೆಸಿರುವ ಅಲೆಕ್ಸಾಂಡರ್‌ ಗಿಲ್ಕ್$Õ? ಈಗಾಗಲೇ ಪಾಪ್‌ ಸ್ಟಾರ್‌, ಹಲವು ಟೆನಿಸಿಗರು, ಟಿವಿ ನಿರ್ಮಾಪಕ… ಹಲವರೊಂದಿಗೆ ಡೇಟಿಂಗ್‌ ಸೆಟ್‌ ಆಡಿರುವ ಶರಪೋವಾ ಉಂಗುರ ಬೆರಳಿಗೆ ರಿಂಗ್‌ ತೊಡಿಸಿದವರಾರು? ಅಷ್ಟಕ್ಕೂ ರಷ್ಯಾದಲ್ಲಿ ಮದುವೆಗೆ ಹೂn ಎಂದಂಥ ಸಂದರ್ಭದಲ್ಲಿ ಮಾತ್ರ ಉಂಗುರ ಧರಿಸುವ ಪದ್ಧತಿ ಇದೆ. ಅಂದರೆ, ಶರಪೋವಾ ಮದುವೆಯಾಗಿ ಬಿಡ್ತಾಳಾ? ಆಗ್ಲೆ ಮದುವೆ ಫಿಕ್ಸ್‌ ಆಬಿ ಬಿಟ್ಟಿದೆಯಾ? ಹೀಗೆ ನ್ಯೂಸ್‌ ಪ್ರಿಂಟ್‌ ಹಾಗೂ ಟಿವಿ ಚಾನೆಲ್‌ ಏರ್‌ಟೈಮ್‌, ಆನ್‌ಲೈನ್‌ ಡೇಟಾ ಶರಪೋವಾಳಿಗಾಗಿ ಖಾಲಿ ಆಗಿದ್ದನ್ನು ಇತ್ತೀಚೆಗೆ ನೋಡಿದ್ದೇವೆ. ಸಿಂಗಲ್ಸ್‌ ಗೆಲುವು, ಗ್ರ್ಯಾನ್‌ಸ್ಲಾಮ್‌ ಜಯಭೇರಿಗೆ ಮಾತ್ರ ಸುಳಿದಾಡುವ ವ್ಯಕ್ತಿತ್ವವೇ ಅಲ್ಲ ಶರಪೋವಾ!

ತಾಕತ್ತಿನಿಂದ ಬಂದಿದ್ದು 5 ಗ್ರ್ಯಾನ್‌ಸ್ಲಾಮ್‌!
ತನ್ನ ಕೆರಿಯರ್‌ನಲ್ಲಿ ಐದು ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ಗಳನ್ನು ಹೊಂದಿರುವ ಶರಪೋವಾ ಆಟದಲ್ಲೂ ತಾಕತ್ತಿದೆ. ಆದರೆ ಅದನ್ನು ಸಂಪೂರ್ಣ ಬಳಕೆ ಮಾಡಿ ವಿಜಯಗಳಾಗಿ ಪರಿವರ್ತಿಸುವ ಕನ್ಸಿಸ್ಟೆನ್ಸಿಯ ಕೊರತೆಯಿದೆ. 2016ರ ಮಾರ್ಚ್‌ನಲ್ಲಿ ನಿಷೇಧಿತ ದ್ರವ್ಯ, ಮೆಲ್ಡೋನಿಯಂ ಅವರ ರಕ್ತದಲ್ಲಿ ಕಾಣಿಸಿದಾಗ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಕೊಂಡಾಗಲೂ ಶರಪೋವಾ ಗಮನ ಸೆಳೆದಿದ್ದರು. ಅವರು ಮರಳಿ ಬರುವ ಬಗ್ಗೆ ಅನುಮಾನಗಳಿದ್ದವು. ನಿಷೇಧದ ಅವಧಿ ಪೂರೈಸಿ ಬಂದಾಗ ಸೆರೆನಾ ವಿಲಿಯಮ್ಸ್‌ಗೆ ಸಿಕ್ಕಂತಹ ರ್ಯಾಕಿಂಗ್‌ ಪಾಯಿಂಟ್ಸ್‌ಗಳ ರಕ್ಷಣೆ ಶರಪೋವಾಗೆ ಇರಲಿಲ್ಲ. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸುವ ಪಾಠವೇ ಆಕೆಗೆ,  ಮರೆತು ಹೋದಂತಾಗಿತ್ತು. ವರ್ಷಾರಂಭದ ಅಮೆರಿಕನ್‌ ಹಾರ್ಡ್‌ಕೋರ್ಟ್‌ ಪಂದ್ಯಗಳಲ್ಲಿ ಅವರು ಕಂಡದ್ದು ಸತತ ಮೂರು ಸೋಲು!

ಶರಪೋವಾ ಹಲವು ಬಾರಿ ಪಂದ್ಯಗಳಲ್ಲಿ ಹಿಡಿತ ತಪ್ಪುವ ಸಂದರ್ಭದಲ್ಲಿ ನಿರಾಶರಾಗಿ ಬೇಗ ಸೋಲೊಪ್ಪಿಕೊಳ್ಳುತ್ತಾರೆ. ಆದರೆ ಮತ್ತೆ ಮತ್ತೆ ಹೋರಾಟಕ್ಕಿಳಿಯುವ ಅವರ ಫೀನಿಕ್ಸ್‌ ಗುಣಕ್ಕೆ ಈ ಸಮಸ್ಯೆಯಿಲ್ಲ. ಈ ವರ್ಷ ಇಟಾಲಿಯನ್‌ ಓಪನ್‌ನ ಸದೃಢ ಪ್ರದರ್ಶನದಿಂದ ಅವರಿಗೆ ಫ್ರೆಂಚ್‌ ಓಪನ್‌ನಲ್ಲಿ ಶ್ರೇಯಾಂಕ ಸಿಕ್ಕಿದೆ. ನೆನಪಿಡಿ, ಈ ಶ್ರೇಯಾಂಕ, ಅಂಕಣದಲ್ಲಿ ಹೋರಾಡಿ ಪಡೆದಿದ್ದೇ ವಿನಃ ಬೇಡಿದ್ದಲ್ಲ, ಬೆದರಿಸಿದ್ದಲ್ಲ. ಮೊದಲ ಸುತ್ತಿನಲ್ಲಿ ತಡವರಿಸಿ ಗೆಲುವು ಸಾಧಿಸಿದ್ದರ ಹೊರತಾಗಿ ಟೆನಿಸ್‌ ವೃತ್ತಿಪರ ಉದ್ಯಮ ಶರಪೋವಾ ಎರಡನೇ ವಾರಕ್ಕೆ ಬಡ್ತಿ ಪಡೆಯುವುದನ್ನು ಬಯಸುತ್ತದೆ. ಅವಳಿದ್ದರೆ ಗ್ಲಾಮರ್‌, ಅವಳಿಲ್ಲದಿದ್ದರೆ ಬೋರ್‌ ಬೋರ್‌!

ಕೆಲ ದಿನಗಳ ಹಿಂದೆ ಶರಪೋವಾ ಇಟಾಲಿಯನ್‌ ಓಪನ್‌ನಲ್ಲಿ ಆಡುತ್ತಿದ್ದ ಸಂದರ್ಭ. ಅಲ್ಲಿನ ಪೋರೋ ಇಟಾಲಿಕೋ ಎಂಬಲ್ಲಿ ಆಕೆ ಪ್ರಾಕ್ಟೀಸ್‌ ನಡೆಸುತ್ತಿದ್ದ ಸಂದರ್ಭದಲ್ಲಿ ಅನತಿ ದೂರದಲ್ಲಿ ವಿಶ್ವದ ನಂಬರ್‌ ಒನ್‌ ಆಟಗಾರ ರಾಫೆಲ್‌ ನಡಾಲ್‌ ಕೂಡ ಅಭ್ಯಾಸ ನಡೆಸಿದ್ದರು. ಹೋಗಿ ಸ್ವಲ್ಪ ಹೊತ್ತಿನ ಪ್ರಾಕ್ಟೀಸ್‌ನ್ನು ನಡಾಲ್‌ ಜೊತೆ ನಡೆಸಿದರೆ ಹೇಗೆ? ಎಂಬ ಯೋಚನೆವೊಂದು ಶರಪೋವಾಗೆ ಬಂತು. ಅದಕ್ಕೆ ಮಾರಿಯಾರ ಬೆಂಬಲ ತಂಡ “ಎಸ್‌’ ಎಂದಿತು. ಶರಪೋವಾ ನಡಾಲ್‌ರಲ್ಲಿ ವಿನಂತಿಯಿಟ್ಟಾಗಲೂ ಅದೇ ಉತ್ತರ ಸಿಕ್ಕಿತು, ಎಸ್‌!

Advertisement

ಇವರಿಬ್ಬರೂ ಆಡಿದ್ದು ಕೇವಲ ಎರಡು ನಿಮಿಷಗಳ ಪ್ರಾಕ್ಟೀಸ್‌. ಈ ಆಟದಿಂದ ಶರಪೋವಾ ಏನು ಕಲಿತಳ್ಳೋ ಗೊತ್ತಾಗಲಿಲ್ಲ, ಆದರೆ ನಡಾಲ್‌ ಅವರೊಂದಿಗೆ ಪ್ರಾಕ್ಟೀಸ್‌ ನಡೆಸಿದ ವಿಡಿಯೋವನ್ನು ತನ್ನ ಟ್ವೀಟರ್‌ ಖಾತಗೆ ಅಪ್‌ಲೋಡ್‌ ಮಾಡಿದಳು. 6300 ಬಾರಿ ಇದು ರೀಟ್ವೀಟ್‌, 7.29 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಟ್ವೀಟರ್‌ ಇತಿಹಾಸದಲ್ಲಿ ಒಂದು ಹೊಸ ದಾಖಲೆಯನ್ನೇ ಈ ಟ್ವೀಟ್‌ ಸೃಷ್ಟಿಸಿತು. 

ವೈಲ್ಡ್‌ಕಾರ್ಡ್‌ಗೆ ಕೊಕ್ಕೆ?
ಈ ಇಬ್ಬರಿಂದ ಬಂದಿರುವ ಗ್ರ್ಯಾನ್‌ಸ್ಲಾಮ್‌ 21, ಶರಪೋವಾಳ ಐದನ್ನು ಬಿಟ್ಟರೆ ಉಳಿದಿದ್ದೆಲ್ಲ ನಡಾಲ್‌ರದ್ದು. ಈವರೆಗೆ ಶರಪೋವಾ 37,389,452 ಡಾಲರ್‌ ಬಹುಮಾನದ ಮೊತ್ತ ಗೆದ್ದಿದ್ದರೆ 96,884,842 ಡಾಲರ್‌ ಗೆದ್ದಿರುವ ಹೆಗ್ಗಳಿಕೆ ನಡಾಲ್‌ರದ್ದು. 2012 ಹಾಗೂ 2014ರಲ್ಲಿ ಫ್ರೆಂಚ್‌ ಓಪನ್‌ ಗೆದ್ದಿರುವ ಶರಪೋವಾಳ ಮಾಡೆಲಿಂಗ್‌, ಅಂಬಾಸಿಡರ್‌ ವೃತ್ತಿ ದುಡಿಮೆ ಸೇರಿಸಿದರೆ ಒಟ್ಟು ಗಳಿಕೆ ಮಾತ್ರ ನಡಾಲ್‌ರನ್ನು ಯಾವಾಗಲೋ ಹಿಂದಿಕ್ಕಿಬಿಡುತ್ತದೆ. ನಿಜ, 31 ವರ್ಷದ ಶರಪೋವಾರ ಆಟ 15 ತಿಂಗಳ ನಿಷೇಧದ ನಂತರ ಗಮನ ಸೆಳೆದಿಲ್ಲ. ಪದೇ ಪದೇ ಗಾಯಾಳುವಾಗುತ್ತಿರುವ ಶರಪೋವಾ ಚೀನಾದಲ್ಲಿ ಒಂದು ಸಣ್ಣ ಪ್ರಮಾಣದ ಡಬುÉÂಟಿಎ ಟೂರ್ನಿ ಗೆದ್ದದ್ದು ಬಿಟ್ಟರೆ ತೀರಾ ಅದ್ಭುತವಾದುದನ್ನು ಮಾಡಿಲ್ಲ. ಅತ್ತ ರ್‍ಯಾಂಕಿಂಗ್‌ ಸುಧಾರಿಸದಿರುವಾಗ ಪಡೆಯಬಹುದಾಗಿದ್ದ ವೈಲ್ಡ್‌ಕಾರ್ಡ್‌ ಅವಕಾಶ ಕೂಡ ವಿವಾದದಿಂದ ದೂರವಾಯಿತು. ನಿಷೇಧದಿಂದ ಹೊರಬಂದ ಕೆಲವೇ ದಿನದಲ್ಲಿ ಪೋರ್ಚೆ ಟೆನಿಸ್‌ ಗ್ರಾಂಡ್‌ಫಿಕ್ಸ್‌ ಟೂರ್ನಿಯಲ್ಲಿ ಮಾರಿಯಾಗೆ ವೈಲ್ಡ್‌ಕಾರ್ಡ್‌ ಕೊಟ್ಟಾಗ ಟೆನಿಸ್‌ ವಿಶ್ಲೇಷಕರು ಮತ್ತು ಖುದ್ದು ಸಹ ಆಟಗಾರರು ನಿಷೇಧದಿಂದ ಹೊರಬಂದವರಿಗೆ ವೈಲ್ಡ್‌ಕಾರ್ಡ್‌ ಕೊಡುವುದು ಒಳ್ಳೆಯ ಸಂದೇಶ ಕೊಡುವುದಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪರಣಾಮ, ಮತ್ತೆಲ್ಲೂ ವೈಲ್ಡ್‌ ಕಾರ್ಡ್‌ ಕೇಳುವುದಕ್ಕೇ ಮಾರಿಯಾ ಹಿಂಜರಿದರು.

ನಿಷೇಧದಿಂದ ಹೊರಬಂದು ಒಂದು ವರ್ಷ ಸಲ್ಲುತ್ತಿದೆ. ಫ್ರೆಂಚ್‌ ಓಪನ್‌ಗೆ ನೇರ ಪ್ರವೇಶ ಮತ್ತು ರ್ಯಾಕಿಂಗ್‌ ಸಿಕ್ಕಿದೆ. ಮೊದಲ ಸುತ್ತಲ್ಲಿ ಪ್ರಯಾಸದ ಜಯ ಗಿಟ್ಟಿಸಿಯಾಗಿದೆ. ಈಗ ಶರಪೋವಾ ಕೂಡ ದೃಢ ಮನಸ್ಸು ಮಾಡಿದ್ದಾರೆ. ಒಂದು ವರ್ಷ, ಎರಡು ವರ್ಷ ದಾಟಲಿ, ನಾನು ಶ್ರಮವಹಿಸಿ ಆಡುವುದನ್ನು ಬಿಡುವುದಿಲ್ಲ. ನನ್ನ ಐದರ ಬೊಕ್ಕಸಕ್ಕೆ ಇನ್ನೊಂದು ಗ್ರ್ಯಾನ್‌ಸ್ಲಾಮ್‌ ಸಿಕ್ಕಿಸದೆ ನಾನು ವಿದಾಯ ಹೇಳುವುದಿಲ್ಲ. ಮಾಜಿ ನಂಬರ್‌ ಒನ್‌ ಆಟಗಾರ್ತಿಯ ಗ್ಲಾಮರ್‌ ನಾಳೆ ಕುಂದಬಹುದು. ಅವರ ಆತ್ಮವಿಶ್ವಾಸ ಮಾತ್ರ ಕುಸಿಯಬಾರದು.

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next