Advertisement

ಆ್ಯಶ್ಲಿ ಬಾರ್ಟಿ ಬಲೆಗೆ ಬಿದ್ದ ಶರಪೋವಾ

12:40 AM Jan 21, 2019 | Team Udayavani |

ಮೆಲ್ಬರ್ನ್: “ಮೆಲ್ಬರ್ನ್ ಪಾರ್ಕ್‌’ನಲ್ಲಿ ರವಿವಾರ ಏರುಪೇರಿನ ಫ‌ಲಿತಾಂಶ ದಾಖಲಾಗಿದೆ. ವನಿತೆಯರ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್‌ ಮರಿಯಾ ಶರಪೋವಾ, 2016ರ ವಿಜೇತೆ ಆ್ಯಂಜೆಲಿಕ್‌ ಕೆರ್ಬರ್‌ ಪ್ರಿ-ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುಂಡು ಕೂಟದಿಂದ ನಿರ್ಗಮಿಸಿದ್ದಾರೆ.

Advertisement

ಇವರಿಬ್ಬರನ್ನೂ ಯುವ ಹಾಗೂ ಅನನುಭವಿ ಆಟಗಾರ್ತಿಯರು ಮಣಿಸಿದ್ದೊಂದು ವಿಶೇಷ. ಮರಿಯಾ ಶರಪೋವಾ ಅವರನ್ನು ಆತಿಥೇಯ ನಾಡಿನ ಆ್ಯಶ್ಲಿ ಬಾರ್ಟಿ 4-6, 6-1, 6-4 ಅಂತರದಿಂದ ಪರಾಭವಗೊಳಿಸಿದರೆ, ಕೆರ್ಬರ್‌ ಅವರನ್ನು ಅಮೆರಿಕದ ಡೇನಿಯಲ್‌ ಕಾಲಿನ್ಸ್‌ 6-0, 6-2 ಅಂತರದಿಂದ ಸುಲಭದಲ್ಲಿ ಹಿಮ್ಮೆಟ್ಟಿಸಿದರು.

ಆ್ಯಶ್ಲಿ ಬಾರ್ಟಿ ಸಾಧನೆಯೊಂದಿಗೆ ದಶಕದ ಬಳಿಕ ಆಸ್ಟ್ರೇಲಿಯನ್‌ ಆಟಗಾರ್ತಿಯೊಬ್ಬಳು ತವರಿನ ಗ್ರ್ಯಾನ್‌ಸ್ಲಾಮ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದಂತಾಯಿತು. 2009ರಲ್ಲಿ ಜೆಲೆನಾ ಡೊಕಿಕ್‌ ಈ ಸಾಧನೆ ಮಾಡಿದ್ದರು. ಇನ್ನೊಂದೆಡೆ ಡೇನಿಯಲ್‌ ಕಾಲಿನ್ಸ್‌ ಅವರಿಗೆ ಇದು ಮೊದಲ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯಾಗಿತ್ತೆಂಬುದು ವಿಶೇಷ.

5 ಬಾರಿಯ ಗ್ರಾÂನ್‌ಸ್ಲಾಮ್‌ ಪ್ರಶಸ್ತಿ ವಿಜೇತೆ ಮರಿಯಾ ಶರಪೋವಾ ಆರಂಭ ನಿರೀಕ್ಷೆಗೆ ತಕ್ಕಂತೆಯೇ ಇತ್ತು. ಮೊದಲ ಸೆಟ್‌ 6-4ರಿಂದ ಗೆದ್ದರು. ಬಳಿಕ ತವರಿನ ವೀಕ್ಷಕರ ಭಾರೀ ಹರ್ಷೋದ್ಗಾರದ ನಡುವೆ ಬಾರ್ಟಿ ತಿರುಗಿ ಬಿದ್ದರು. ನಿರ್ಣಾಯಕ ಸೆಟ್‌ನಲ್ಲಿ 4-0 ಮುನ್ನಡೆ ಸಾಧಿಸಿದ ತಾಕತ್ತು ಇವರದ್ದಾಗಿತ್ತು. ಅನಂತರ ಶರಪೋವಾ ಸತತ 3 ಗೇಮ್‌ಗಳನ್ನು ಗೆದ್ದು ಹೋರಾಟ ಜಾರಿಯಲ್ಲಿರಿಸಿದರು. ಆದರೆ ಬಾರ್ಟಿ ಭಯಪಡಲಿಲ್ಲ. ಶರಪೋವಾ ಅಂಕ ನಾಲ್ಕರ ಗಡಿ ದಾಟಲಿಲ್ಲ.

ಬಾರ್ಟಿಗೆ ಕ್ವಿಟೋವಾ ಸವಾಲು
ಅಶ್ಲಿ ಬಾರ್ಟಿ ಕ್ವಾರ್ಟರ್‌ ಫೈನಲ್‌ನಲ್ಲಿ 2 ಬಾರಿಯ ವಿಂಬಲ್ಡನ್‌ ಚಾಂಪಿಯನ್‌ ಪೆಟ್ರಾ ಕ್ವಿಟೋವಾ ಸವಾಲನ್ನು ಎದುರಿಸಲಿದ್ದಾರೆ. 8ನೇ ಶ್ರೇಯಾಂಕದ ಕ್ವಿಟೋವಾ ಅಮೆರಿಕದ ಯುವ ಆಟಗಾರ್ತಿ ಅಮಂಡಾ ಅನಿಸಿಮೋವಾಗೆ 6-2, 6-1 ಅಂತರದ ಸೋಲುಣಿಸಿದರು.

Advertisement

ಅನಿಸಿಮೋವಾ ಸೋಲಿನಿಂದ ನಿರಾಶರಾದ ಅಮೆರಿಕದ ಅಭಿಮಾನಿಗಳಿಗೆ 35ನೇ ರ್‍ಯಾಂಕಿಂಗ್‌ ಆಟಗಾರ್ತಿ ಡೇನಿಯಲ್‌ ಕಾಲಿನ್ಸ್‌ ಸಂತಸ ಮೂಡಿಸಿದರು. 2016ರ ಚಾಂಪಿಯನ್‌, ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅವರನ್ನು 6-0, 6-2ರಿಂದ ಸುಲಭದಲ್ಲಿ ಮಣಿಸಿ ಮುನ್ನುಗ್ಗಿದರು. ಈ ಗೆಲುವಿಗೆ ತಗುಲಿದ್ದು 56 ನಿಮಿಷ ಮಾತ್ರ. ಕಾಲಿನ್ಸ್‌ ಇನ್ನು ತಮ್ಮದೇ ನಾಡಿನ ಸ್ಲೋನ್‌ ಸ್ಟೀಫ‌ನ್ಸ್‌ ಅಥವಾ ರಶ್ಯದ ಅನಾಸ್ತಾಸಿಯಾ ಪಾವುÉಚೆಂಕೋವಾ ಸವಾಲನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next