Advertisement

Kethikal ಗುಡ್ಡದ ಮಣ್ಣು ಮಾಫಿಯಾ ಪ್ರಕರಣ:ತನಿಖಾ ವರದಿ ಬಂದ ಬಳಿಕ ಕ್ರಮ:ದಿನೇಶ್‌ ಗುಂಡೂರಾವ್‌

11:17 PM Aug 15, 2024 | Team Udayavani |

ಮಂಗಳೂರು: ಕೆತ್ತಿಕಲ್‌ ಗುಡ್ಡದಲ್ಲಿ ಅವ್ಯಾಹತವಾಗಿ ಮಣ್ಣು ತೆಗೆದ ಕಾರಣ ಉಂಟಾಗಿರುವ ಅಪಾ ಯದ ಪರಿಸ್ಥಿತಿ ಕುರಿತಂತೆ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ವರದಿ ಸಿಗಲಿದೆ. ಅದರ ಆಧಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2018-19ರಿಂದಲೇ ಅಲ್ಲಿಂದ ಮಣ್ಣು ತೆಗೆದಿರುವ ಬಗ್ಗೆ ವರದಿ ಇದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳವರು ಏನು ಮಾಡಿದ್ದಾರೆ ಎಂಬ ಬಗ್ಗೆ ತನಿಖಾ ತಂಡವು ವರದಿ ನೀಡಲಿದೆ. ಇದೇ ವೇಳೆ ಅಲ್ಲಿರುವ 9 ಮನೆಯವರನ್ನು ಸ್ಥಳಾಂತರ ಮಾಡಬೇಕಾಗಿದೆ ಎಂದರು.

ಕೆತ್ತಿಕಲ್‌ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಜಿಯಾಲಾಜಿಕಲ್‌ ಸರ್ವೇ ಆಫ್ ಇಂಡಿಯಾದ ತಂಡ ಪರಿಶೀಲಿಸಿದೆ. ಅವರು ನೀಡಿರುವ ಸಲಹೆಗಳನ್ನು ಪಾಲಿಸಲು ಜಿಲ್ಲಾಡ ಳಿತ ಕ್ರಮ ಕೈಗೊಳ್ಳಲಿದೆ. ಎನ್‌ಐಟಿಕೆ ತಂಡವೂ ಪರಿಶೀಲಿಸಿದ್ದು, ವರದಿ ನೀಡ ಲಿದೆ. ಎನ್‌ಎಚ್‌ಎಐ ವತಿಯಿಂದಲೂ ಪರಿಶೀಲನೆ ನಡೆದಿದೆ ಎಂದರು.

ಮಂಗಳೂರಿನ ಪೊಲೀಸ್‌ ವಸತಿ ನಿಲಯದ ಹೊಸ ಕಟ್ಟಡಗಳ ಕಳಪೆ ಕಾಮಗಾರಿ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ಪಡೀಲ್‌ನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಮಾರ್ಟ್‌ ಸಿಟಿಯಡಿ 20 ಕೋಟಿ ರೂ. ಮಂಜೂರು ಆಗಿದೆ. ಶೀಘ್ರವೇ ಕೆಲಸ ಮುಗಿಸಿ ಉದ್ಘಾಟನೆ ನಡೆಯಲಿದೆ ಎಂದವರು ಹೇಳಿದರು.

ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ
“ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ಯೋಜನೆಗಳನ್ನು ಇನ್ನಷ್ಟು ಜನರಿಗೆ ಮುಟ್ಟಿಸುವ ಪ್ರಯತ್ನದೊಂದಿಗೆ ಸೋರಿಕೆ ಆಗದೆ ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. “ಶಕ್ತಿ’ ಮಹಿಳೆಯರಿಗಾಗಿಯೇ ಮಾಡಲಾದ ಯೋಜನೆಯಾಗಿದ್ದು, ಅದಕ್ಕೆ ಮಾನದಂಡವಿಲ್ಲ. ಗೃಹಲಕ್ಷ್ಮೀಯು ಬಡ ಕುಟುಂಬದ ಮಹಿಳೆಯರಿಗಷ್ಟೆ ಸಿಗಬೇಕಾಗಿದೆ. ಅದಕ್ಕಾಗಿ ಸಮೀಕ್ಷೆ ನಡೆಸಿ, ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next