Advertisement

Akhilesh Yadav ವಿವಾದ: ಮಠಾಧೀಶರು, ಮಾಫಿಯಾ ಒಂದೇ

12:24 AM Sep 14, 2024 | Team Udayavani |

ಲಕ್ನೋ: ಹಿಂದೂ ಮಠಾಧೀಶರು ಮತ್ತು ಮಾಫಿಯಾಗಳು ಒಂದೇ ರೀತಿ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರ ಪ್ರದೇಶ ಬಿಜೆಪಿ ಸರಕಾರದ ಅವಧಿಯಲ್ಲಿ ಯಾರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಮುಗಿಸಲಾಗುತ್ತದೋ ಗೊತ್ತಾಗುತ್ತಿಲ್ಲ. ಉತ್ತರ ಪ್ರದೇಶವನ್ನು ದೇಶದ ನಕಲಿ ಎನ್‌ಕೌಂಟರ್‌ಗಳ ರಾಜಧಾನಿಯನ್ನಾಗಿ ಬಿಜೆಪಿ ಮಾಡಿದೆ. ಹಿಂದೂ ಮಠಾಧಿಪತಿಗಳು ಮತ್ತು ಮಾಫಿಯಾಗಳ ನಡುವೆ ವ್ಯತ್ಯಾಸ ಇಲ್ಲ ಎಂದು ಅಖಿಲೇಶ್‌ ಟೀಕಿಸಿದ್ದರು.

“ಡಿಎಂಕೆ ನಾಯಕರು ಹಿಂದೂ ಧರ್ಮವನ್ನು ಅವಮಾನಿಸಿದ ಬಳಿಕ, ಕಾಂಗ್ರೆಸ್‌ ನಾಯಕರು ಹಿಂದೂಗಳು ಹಿಂಸಾಚಾರಿಗಳು ಎಂದು ಹಣೆಪಟ್ಟಿ ಕಟ್ಟಿದರು. ಇದೀಗ ಎಸ್‌ಪಿ ಸರದಿ’ ಎಂದು ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲ ಟೀಕಿಸಿದ್ದಾರೆ. ಆಗ್ರಾದ ಮನ್‌ಕಾಮೇಶ್ವರ್‌ ದೇಗುಲದ ಮಹಾಂತ ಯೋಗೇಶ್‌ ಪುರಿ ಹೇಳಿಕೆ ಖಂಡಿಸಿದ್ದಾರೆ. ಅವರ ತಂದೆಯವರು 1992ರಲ್ಲಿ ಕರಸೇವಕರ ಮೇಲೆ ಗುಂಡು ಹಾರಿಸಿ ಕೊಲ್ಲಿಸುವಂತೆ ಆದೇಶ ನೀಡಿದ್ದು ನೆನಪಿದೆಯೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next