Advertisement

Miya Muslims ಹೇಳಿಕೆ; ಅಸ್ಸಾಂ ಸಿಎಂ ಹಿಮಂತ ವಿರುದ್ಧ ಸಿಬಲ್ ಆಕ್ರೋಶ

12:02 PM Aug 28, 2024 | Team Udayavani |

ಹೊಸದಿಲ್ಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ‘ಮಿಯಾ ಮುಸ್ಲಿಮರು ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುವುದಿಲ್ಲ’ ಎಂಬ ಹೇಳಿಕೆ ಶುದ್ಧ ಕೋಮು ವಿಷ, ಇಂತಹ ಹೇಳಿಕೆಗೆ ಮೌನ ಉತ್ತರವಲ್ಲ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಬುಧವಾರ ಆಕ್ರೋಶ ಹೊರ ಹಾಕಿದ್ದಾರೆ.

Advertisement

ನಾಗಾಂವ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಚರ್ಚಿಸಲು ವಿಪಕ್ಷಗಳು ಮಂಡಿಸಿದ ಮುಂದೂಡಿಕೆ ನಿರ್ಣಯಗಳ ಅಂಗೀಕಾರದ ಕುರಿತು ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮ ‘ಮಿಯಾ ಮುಸ್ಲಿಮರು ಅಸ್ಸಾಂ ಅನ್ನು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ” ಎಂದು ಕಿಡಿ ಕಾರಿದ್ದರು.

ಹೇಳಿಕೆ ಕುರಿತು X ನಲ್ಲಿ ಪ್ರತಿಕ್ರಿಯಿಸಿದ ಸಿಬಲ್ “ಹಿಮಂತ ಹೇಳಿಕೆ ಶುದ್ಧ ಕೋಮು ವಿಷ. ಇದಕ್ಕೆ ಮೌನ ಉತ್ತರವಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಿಯಾ’ ಎಂಬ ಪದವನ್ನು ಬೆಂಗಾಲಿ ಮಾತನಾಡುವ ಮುಸ್ಲಿಮರಿಗೆ ಅವಹೇಳನಕಾರಿ ಪದವಾಗಿ ಬಳಸಲಾಗುತ್ತಿತ್ತು.ಬಂಗಾಳಿ ಮಾತನಾಡದ ಜನರು ಸಾಮಾನ್ಯವಾಗಿ ಅವರನ್ನು ಬಾಂಗ್ಲಾದೇಶಿ ವಲಸಿಗರು ಎಂದು ಗುರುತಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಿಯಾ ಪದವನ್ನು ಪ್ರತಿಭಟನೆಯ ಸೂಚಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next