Advertisement

Paris 2024; ಗಾಯಗೊಂಡ ಸೆಮಿ ಫೈನಲ್‌ ನಿಂದ ಹಿಂದೆ ಸರಿದ ಮಾಜಿ ಪದಕ ವಿಜೇತೆ ಕೆರೊಲಿನಾ ಮರಿನ್

03:23 PM Aug 04, 2024 | Team Udayavani |

ಪ್ಯಾರಿಸ್:‌ ಮಾಜಿ ‌ಬ್ಯಾಡ್ಮಿಂಟನ್ ಚಿನ್ನದ ಪದಕ ವಿಜೇತೆ ಕೆರೊಲಿನಾ ಮರಿನ್ ಅವರು ಭಾನುವಾರ (ಆ.04) ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್‌ ಪಂದ್ಯದ ವೇಳೆ ತಮ್ಮ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿ ಕೂಟ ತ್ಯಜಿಸಿದರು.

Advertisement

ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧದ ತಮ್ಮ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ ಪಂದ್ಯದ ವೇಳೆ ಕೆರೊಲಿನಾ ಮರಿನ್‌ ಅವರು ಗಾಯಗೊಂಡರು.

ಸ್ಪೇನ್‌ ನ ಆಟಗಾರ್ತಿ ಮರಿನ್ ‌2016ರ ರಿಯೊ ಒಲಿಂಪಿಕ್ಸ್‌ ನ ಫೈನಲ್‌ ನಲ್ಲಿ ಭಾರತದ ಪಿ.ವಿ ಸಿಂಧು ಅವರನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿದ್ದರು.

ಮೂರು ಬಾರಿಯ ವಿಶ್ವ ಚಾಂಪಿಯನ್‌ ಮರಿನ್ ಇಂದಿನ ಪಂದ್ಯದಲ್ಲಿಎದುರಾಳಿ ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ದ ಮೊದಲ ಸೆಟ್‌ ಗೆದ್ದು, ಎರಡನೇ ಸೆಟ್‌ ಮುನ್ನಡೆ ಕಾಯ್ದುಕೊಂಡಿದ್ದರು. 21-14, 10-06 ರಲ್ಲಿದ್ದಾಗ ಮೊಣಕಾಲಿನ ನೋವಿಗೆ ಒಳಗಾದರು. ಪಟ್ಟಿಯನ್ನು ಕಟ್ಟಿಕೊಂಡು ಇನ್ನೆರಡು ಅಂಕಗಳನ್ನು ಆಡಿದರಾದರೂ ಬಳಿಕ ನಿವೃತ್ತಿ ಹೊಂದಲು ನಿರ್ಧರಿಸಿದರು. ಕಣ್ಣೀರು ಸುರಿಸಿಕೊಂಡು ಮರಿನ್‌ ಮೈದಾನದಿಂದ ಹೊರಹೋದರು.

Advertisement

31 ವರ್ಷದ ಮರಿನ್ ಈ ಹಿಂದೆ ತನ್ನ ಎರಡೂ ಮೊಣಕಾಲುಗಳಲ್ಲಿ ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL) ಗಾಯಗಳಿಂದ ಬಳಲುತ್ತಿದ್ದರು.

2012 ರಲ್ಲಿ ಲಂಡನ್ ಒಲಿಂಪಿಕ್ಸ್‌ ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಚೀನಾದ ವಾಂಗ್ ಕ್ಸಿನ್ ಅವರು ಕಂಚಿನ ಪದಕಕ್ಕಾಗಿ ಭಾರತದ ಸೈನಾ ನೆಹ್ವಾಲ್ ವಿರುದ್ಧ 21-18, 1-0 ಅಂತರದಲ್ಲಿ ಆಡುವಾಗ ಮೊಣಕಾಲು ಗಾಯಗೊಂಡು ಹಿಂದೆ ಸರಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next