Advertisement

ಶರಣ್‌ ಬರ್ತ್‌ಡೇ ಸ್ಪೆಷಲ್‌:  ಗುರು ಶಿಷ್ಯರು ಫ‌ಸ್ಟ್‌ಲುಕ್‌

11:35 AM Feb 07, 2021 | Team Udayavani |

ನಟ ಶರಣ್‌ ತಮ್ಮ “ಲಡ್ಡು ಸಿನಿಮಾ ಹೌಸ್‌’ನಡಿ ಹೊಸ ಸಿನಿಮಾ “ಗುರು-ಶಿಷ್ಯರು’ ಮಾಡಲು ಹೊರಟಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರದ ಫ‌ಸ್ಟ್‌ ಲುಕ್‌ ರಿಲೀಸ್‌ ಆಗಿದೆ. ಅದಕ್ಕೆ ಕಾರಣ ಶರಣ್‌ ಹುಟ್ಟುಹಬ್ಬ.

Advertisement

ಹೌದು, ಫೆಬ್ರವರಿ 06 ಶರಣ್‌ ಬರ್ತ್‌ಡೇ. ಆ ಹಿನ್ನೆಲೆಯಲ್ಲಿ ಚಿತ್ರತಂಡ ಶರಣ್‌ ಅವರ ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಲಾಗಿದೆ. ಈ ಹಿಂದಿನ ಸಿನಿಮಾಗಳಿ ಗಿಂತ ಶರಣ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿ ದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಶರಣ್‌ಗೆ ತರುಣ್‌ ಸುಧೀರ್‌ ಸಾಥ್‌ ನೀಡುತ್ತಿದ್ದಾರೆ.

ಇದನ್ನೂ ಓದಿ:ನಮ್ಮದು ಟಾಮ್‌ – ಜೆರ್ರಿ ಥರದ ಕ್ಯಾರೆಕ್ಟರ್‌: ಪೊಗರು ಬಗ್ಗೆ ಕೂರ್ಗ್‌ ಬೆಡಗಿ ಮಾತು

ಈ ಚಿತ್ರವನ್ನು ಜಡೇಶ್‌ ಹಂಪಿ ನಿರ್ದೇಶಿಸುತ್ತಿದ್ದಾರೆ. ತರುಣ್‌ ಸುಧೀರ್‌ ಈ ಚಿತ್ರದ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಆರೂರು ಸುಧಾಕರ್‌ ಶೆಟ್ಟಿಯವರ ಛಾಯಾಗ್ರಹಣವಿದೆ.

ಇದೇ ಸಂದರ್ಭದಲ್ಲಿ ಶರಣ್‌ ನಟನೆಯ “ಅವತಾರ್‌ ಪುರುಷ’ ಚಿತ್ರದ ಬರ್ತ್‌ಡೇ ಟೀಸರ್‌ ರಿಲೀಸ್‌ ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next