Advertisement
ಆದಿ ಶಂಕರಾಚಾರ್ಯರು ತಮ್ಮ ಆನಂದಲಹರಿಯಲ್ಲಿ”ಶಿವ ಶಕ್ತ್ಯಾಯುಕ್ತೋ ಭವತಿ ಪ್ರಭವಿತಂ|ನಚೀದೇವೀಂ ದೇವೋನ ಬಲುಶಕ್ತಃ ಸ್ಕಂದಿತುಮಷಿ||’ ಎಂದಿದ್ದಾರೆ.
ಜಗನ್ಮಾತೆಯ ಆರಾಧನೆಗೆ ಉತ್ಸುಕತೆ ಇರುವವರು ಮೊತ್ತಮೊದಲು ಆಚಾರವಂತರಾಗಲು ಪ್ರಯತ್ನಿಸಬೇಕು. ಅಹಿಂಸೆ, ಇಂದ್ರಿಯನಿಗ್ರಹ, ಅಕ್ರೋದ, ಸತ್ಯವಾಚನ, ತ್ರಿಕರಣ ಶುದ್ಧಿಗಳಿಗೆ ಮಹತ್ವ ನೀಡಿ, ಷಡ್ವರ್ಗಗಳನ್ನು ನಿಗ್ರಹಿಸಲು ಯತ್ನಿಸಬೇಕು. ದೇವಿಯ ಪ್ರಸಾದವೆಂದೇ ಆಹಾರಗಳನ್ನು ಪರಿಗಣಿಸಿ ಸೇವಿಸಬೇಕು. ಸಾಧ್ಯವಾದಷ್ಟು ಮೌನವ್ರತರಾಗಿದ್ದುಕೊಂಡು ಸ್ತುತಿ, ಸ್ತೋತ್ರ, ಪಾರಾಯಣಗಳಿಗೆ ತನು-ಮನಗಳನ್ನು ಸಮರ್ಪಿಸಬೇಕು. ಪಾಮರರಿಂದ ಮನುಷ್ಯರು ಕೂಡ ಭಕಾöರಾಧನೆಯನ್ನು ಆಚಾರವಂತರಾಗಿ ಸರಳರೀತಿಯಿಂದ ನೆರವೇರಿಸಬಹುದು. ಯಾವುದೇ ಆರಾಧನೆಯನ್ನು ನಾವು ಎಷ್ಟು ಮಾಡುತ್ತೇವೆ ಎನ್ನುವುದಕ್ಕಿಂತಲೂ ಹೇಗೆ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ.
Related Articles
ದುರ್ಗೆಯು ಸ್ತೋತ್ರಪ್ರಿಯೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಶರನ್ನವರಾತ್ರಿಯ ಪವಿತ್ರ ಪರ್ವಕಾಲದಲ್ಲಿ ಸರಳವಾದ ಕೆಲವು ಸ್ತೋತ್ರಗಳನ್ನು ಪಠಿಸುವುದರಿಂದ ಮಾತೆಯ ಅನುಗ್ರಹವನ್ನು ಪಡೆಯಲು ಅವಕಾಶವಿದೆ.
“ದೇಹಿ ಸೌಭಾಗ್ಯಂ ಆರೋಗ್ಯಂ ದೇಹಿದೇವಿ ಪರಂಸುಖಂ|
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಅದೇ ರೀತಿ,”ವಿದ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂ ಜನಂಕುರು
ರೂಪಂ ದೇಹಿ ಜಯಂ ದೇಹಿ ಯಶೋದೇಹಿ ದ್ವಿಷೋಜಹಿ||’
ಈ ಸ್ತೋತ್ರವನ್ನು ಸರ್ವರೂ ದಿನನಿತ್ಯ ಪಠಿಸಬಹುದು.
“ಯಾ ದೇವಿ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಸೆ„ ನಮಸ್ತಸ್ಸೆ„ ನಮಸ್ತಸ್ಸೆ„ ನಮೋ ನಮಃ|’
ಇದು ಸದಾಕಾಲ ಪಠಿಸಬಹುದಾದ ಸರಳವಾದ ಮಾತೃಸ್ತುತಿ. ಎಲ್ಲಕ್ಕಿಂತಲೂ ಸುಲಭವಾದ ಸ್ತುತಿ ಎಂದರೆ ಶಂಕರ ಭಗವತ್ಪಾದರೆಂದಂತೆ ಆತ್ಮಸಮರ್ಪಣೆ ಮತ್ತು ಮನೋರಾಧನೆ. ಇದರಿಂದ ತಾಯಿ ನಮ್ಮ ಮನದಲ್ಲೇ ನೆಲೆ ನಿಲ್ಲುತ್ತಾಳೆ.
Advertisement
– ಮೋಹನದಾಸ ಸುರತ್ಕಲ್