Advertisement

NCP ಬಿಕ್ಕಟ್ಟನ್ನು ಮುಚ್ಚಿಡಲು ಶರದ್‌ ಪವಾರ್‌ ಯತ್ನ!

10:17 PM Aug 25, 2023 | Team Udayavani |

ಮುಂಬೈ: ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಬಣವು ಶಿಂಧೆ ನೇತೃತ್ವದ ಬಿಜೆಪಿ ಸರ್ಕಾರ ಸೇರ್ಪಡೆಗೊಂಡ ಬಳಿಕವೂ ಎನ್‌ಸಿಪಿ ವಿಭಜನೆಗೊಂಡಿಲ್ಲವೆಂದು ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಹೇಳಿಕೆ ನೀಡಿದ್ದಾರೆ.

Advertisement

ಈ ಮೂಲಕ ಪಕ್ಷದ ಒಡಕಿಗೆ ತೇಪೆ ಹಾಕಲು ಯತ್ನಿಸಿದ್ದಾರೆ. ಕೊಲ್ಹಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷವೊಂದರಲ್ಲಿನ ನಾಯಕರು ವಿಭಿನ್ನ ನಿಲುವುಗಳನ್ನು ತೆಗದುಕೊಳ್ಳುತ್ತಾರೆ ಮತ್ತು ಅದು ಅವರ ಹಕ್ಕು.

ಪಕ್ಷದಿಂದ ಕೆಲವರು ಹೊರ ನಡೆದಿದ್ದಾರೆ ಎಂದರೆ, ಪಕ್ಷದ ಬಹುತೇಕರು ಹೊರ ನಡೆದರು ಎಂದರ್ಥವಲ್ಲ. ಅಲ್ಲದೇ, ತಮ್ಮದೇ ನಿಲುವುಗಳನ್ನು ತೆಗೆದುಕೊಳ್ಳುವ ಹಕ್ಕು ಅವರಿಗಿದೆ, ಪ್ರಜಾಪ್ರಭುತ್ವ ಅದನ್ನು ನೀಡಿದೆ ಹಾಗಾಗಿ ಇದನ್ನು ಪಕ್ಷದ ಒಡಕು ಎಂದು ನಿರ್ಣಯಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಇತ್ತೀಚೆಗಷ್ಟೇ ಶರದ್‌ ಅವರ ಪುತ್ರಿ ಸುಪ್ರಿಯಾ ಸುಳೆ ಕೂಡ ಪಕ್ಷದಲ್ಲಿ ಯಾವುದೇ ಒಡಕಿಲ್ಲ ಎಂದಿದ್ದರು. ಮಾತ್ರವಲ್ಲದೇ, ಪಕ್ಷವನ್ನು ಕೆಲವರು ತೊರೆದ ಮಾತ್ರಕ್ಕೆ, ಅದು ವಿಭಜನೆಗೊಳ್ಳುವುದಿಲ್ಲ. ಪಕ್ಷದ ಅಧ್ಯಕ್ಷರಾಗಿ ಪವಾರ್‌ ಅವರು ಮುಂದುವರಿದು, ಅವರೇ ಪಕ್ಷವನ್ನೂ ಮುನ್ನಡೆಸುತ್ತಾರೆ ಎಂದಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ಅಜಿತ್‌ ಪವಾರ್‌ ಬಿಜೆಪಿ ಜತೆಗೆ ಕೈಜೋಡಿಸಲು ಖುದ್ದು ಶರದ್‌ ಕಾರಣ ಎಂಬ ವರದಿಗಳು ಇವೆ. ಮಾತ್ರವಲ್ಲ ಶರದ್‌ ಬಣ ಅಜಿತ್‌ ಜೊತೆಗೆ ಸೇರಿಕೊಳ್ಳಬಹುದು ಎಂಬ ವದಂತಿಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next