Advertisement

ಹಳೇ ಹಾಡಿಗೆ ಶಾನ್ವಿ-ಶ್ರದ್ಧಾ ಡ್ಯಾನ್ಸ್!

03:29 PM Nov 01, 2017 | Team Udayavani |

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಚಿತ್ರ ನಟಿಯರಾದ ಶ್ರದ್ಧಾ ಶ್ರೀನಾಥ್‌ ಹಾಗೂ ಶಾನ್ವಿ ಶ್ರೀವಾತ್ಸವ್‌ ಅವರು “ರೆಟ್ರೋ 2 ಮಟ್ರೋ’ ಶೀರ್ಷಿಕೆಯಡಿ ಕನ್ನಡದ ಜನಪ್ರಿಯ ಗೀತೆಗಳಿಗೆ ಕಾರೊಂದರಲ್ಲಿ ಕುಳಿತು ವಿನೂತನ ಶೈಲಿಯಲ್ಲಿ ಚಿತ್ರಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಜೋರು ಸದ್ದು ಮಾಡುತ್ತಿದೆ.

Advertisement

ಕಾರೊಂದರ ಮುಂದಿನ ಸೀಟಲ್ಲಿ ಕುಳಿತು, ಕನ್ನಡದ ಜನಪ್ರಿಯ ನಟರ, ಜನಪ್ರಿಯ ಕನ್ನಡ ಚಿತ್ರಗೀತೆಗಳಿಗೆ ಕುಳಿತಲ್ಲೇ ನಟನೆ ಮಾಡುವ ಮೂಲಕ ಕನ್ನಡಕ್ಕೆ ವಿಶೇಷ ನಮನ ಸಲ್ಲಿಸಿದ್ದಾರೆ. “ಸತ್ಯ ಹರಿಶ್ಚಂದ್ರ’ ಚಿತ್ರದ “ಕುಲದಲ್ಲಿ ಕೀಳ್ಯಾವುದೋ …’, “ನಾಗರಹಾವು’ ಚಿತ್ರದ “ಹಾವಿನ ದ್ವೇಷ …’, “ಮಂಡ್ಯದ ಗಂಡು’ ಚಿತ್ರದ “ಮಂಡ್ಯದ ಗಂಡು …’, “ಗೀತಾ’ ಚಿತ್ರದ “ಸಂತೊಷಕ್ಕೆ ಹಾಡು ಸಂತೋಷಕ್ಕೆ …’ ಸೇರಿದಂತೆ ಅನೇಕ ಹಾಡುಗಳಿಗೆ ಅಭಿನಯಿಸಿದ್ದಾರೆ.

ಅದರಲ್ಲೂ ಕಾರಲ್ಲಿ ಕುಳಿತಲ್ಲೇ, ಆ ಚಿತ್ರದ ಹೀರೋಗಳು ಹಾಕಿದ ಕಾಸ್ಟ್ಯೂಮ್‌ನಂತೆಯೇ ಈ ನಟಿಯರೂ ಅಂಥದ್ದೇ ಕಾಸ್ಟ್ಯೂಮ್‌ ಧರಿಸಿ ಮಾಡಿರುವುದು ವಿಶೇಷ. ಅಂದಹಾಗೆ, ಲೋಲ್‌ಬಾಗ್‌, ಫಿಲ್ಮಿ ಫ‌ನ್‌, ಟ್ರೋಲ್‌ ಹೈಕ್ಳು ಖ್ಯಾತಿಯ ಪ್ರದೀಪ್‌ ದೊಡ್ಡಯ್ಯ ಕೂಡ ಹಿಂಬದಿ ಸೀಟಲ್ಲಿ ಕುಳಿತು ಅವರಿಗೆ ಸಾಥ್‌ ಕೊಟ್ಟಿದ್ದಾರೆ. ಸದ್ಯಕ್ಕೆ ಈ ವೀಡಿಯೋ ಫೇಸ್‌ಬುಕ್‌ ಸೇರಿದಂತೆ ಉಳಿದ ಸಾಮಾಜಿಕ ತಾಣದಲ್ಲಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next