ಸಿದ್ದಾಪುರ: ಶಂಕರನಾರಾಯಣ ಗ್ರಾಮದ ಗೋಳಿಕಟ್ಟೆ ಗುಡ್ಡೆಯ ಮೇಲಿರುವ ಬಿಎಸ್‌ಎನ್‌ಎಲ್ ಮೈಕ್ರೋ ಟವರ್ ಕಟ್ಟಡದ ಒಳಗೆ ಇರುವ ನಿರುಪಯುಕ್ತ 6 ಬ್ಯಾಟರಿ ಕಳವು ಮಾಡಿದ ಕಳ್ಳರನ್ನು ನ.28ರಂದು ಪೊಲೀಸರು ಬಂದಿಸಿದ್ದಾರೆ.
ದೂರು ದಾಖಲಾದ ಒಂದೇ ದಿನದಲ್ಲಿ ಕಳ್ಳರನ್ನು ಪೊಲೀಸರು ಬಂದಿಸಿದ್ದಾರೆ. ಆರೋಪಿಗಳಾದ ಕೃಷ್ಣ (45)ಉದ್ಯಾವರ, ಬದ್ರುದ್ದೀನ್(38) ಬಂಟ್ವಾಳ, ಉಸ್ಮಾನ್(38) ನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನಕ್ಕೆ ಬಳಸಿದ ಪಿಕಪ್ ವಾಹನ ಸಹಿತ ಸುಮಾರು 4,60,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳವು ಆದ ಬಗ್ಗೆ ಪಿಟಿಪಿಎಲ್ ಕಂಪೆನಿಯ ಟೆಕ್ನೀಷಿಯನ್ ಪ್ರದೀಪ ಆಜ್ರಿ ಅವರು ನ. 27ರಂದು ಪೊಲೀಸರಿಗೆ ದೂರು ನೀಡಿದ್ದರು.
ಶಂಕರನಾರಾಯಣ ಪಿಎಸ್‌ಐ ನಾಸೀರ್ ಹುಸೇನ್ ಮತ್ತು ಸಿಬಂದಿ ಕಾರ್ಯಚರಣೆಯಲ್ಲಿ ಪಾಲ್ಗೊಂಡರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.