Advertisement

ಐಪಿಎಲ್ ನಡೆಸಲು ಬಿಸಿಸಿಐಗೆ ಇನ್ನೂ ಸಮಯವಿದೆ ಎಂದು ಅನಿಸುವುದಿಲ್ಲ: ಮೊಹಮ್ಮದ್ ಶಮಿ

08:46 AM May 07, 2020 | keerthan |

ಮುಂಬೈ: ಕೋವಿಡ್-19 ಸೋಂಕಿನ ಕಾರಣದಿಂದ ಮುಂದೂಡಲ್ಪಟ್ಟಿರುವ ಐಪಿಎಲ್ ಅನ್ನು ಈ ವರ್ಷ ನಡೆಸಲು ಇನ್ನು ಬಿಸಿಸಿಐಗೆ ಸಮಯ ಇದೆ ಎಂದು ನನಗನಿಸುವುದಿಲ್ಲ ಎಂದು ವೇಗಿ ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟಿದ್ದಾರೆ.

Advertisement

13ನೇ ಆವೃತ್ತಿಯ ಐಪಿಎಲ್ ಅನ್ನು ಮಾರ್ಚ್ 29 ರಿಂದ ನಡೆಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೇಗಾಗಲೇ ಐಪಿಎಲ್ ನ ಬಹುತೇಕ ಪಂದ್ಯಗಳು ಮುಗಿಯುತ್ತಿದ್ದವು. ಆದರೆ ಕೋವಿಡ್-19 ಕಾರಣದಿಂದ ಲಾಕ್ ಡೌನ್ ಹೇರಿದ ಕಾರಣ ಐಪಿಎಲ್ ನ್ನು ಮೊದಲ ಬಾರಿಗೆ ಎಪ್ರಿಲ್ 15ರವರೆಗೆ ಮುಂದೂಡಲಾಯಿತು.

ಆದರೆ ಸರಕಾರ ಲಾಕ್ ಡೌನ್ ಅನ್ನು ಮತ್ತೂ ಮುಂದುವರಿಸಿದಾಗ ಐಪಿಎಲ್ ಮುಂದೂಡುವುದು ಅನಿವಾರ್ಯವಾಗಿತ್ತು. ಸದ್ಯ ಐಪಿಎಲ್ ಕೂಟವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ಮುಂದಿನ ಸಪ್ಟೆಂಬರ್ ನಲ್ಲಿ ಆಸೀಸ್ ನೆಲದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಬೇರೆ ದೇಶಗಳ ದ್ವಿಪಕ್ಷೀಯ ಸರಣಿಗಳಿದೆ. ಹಾಗಾಗಿ ಐಪಿಎಲ್ ನಡೆಸಲು ಬಿಸಿಸಿಐಗೆ ಸಮಯ ಸಿಗಬಹುದೆಂದು ನನಗೆ ಅನಿಸುವುದಿಲ್ಲ ಎಂದು ಕಿಂಗ್ಸ್ ಇಲೆವೆನ್ ವೇಗಿ ಶಮಿ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next