Advertisement

ಮಳೆ: ಅಂಗಳದಲ್ಲಿ ಈಜಾಡಿದ ಶಕಿಬ್‌!

11:06 PM Dec 05, 2021 | Team Udayavani |

ಢಾಕಾ: ಬಾಂಗ್ಲಾದೇಶ- ಪಾಕಿಸ್ಥಾನ ನಡುವಿನ ಢಾಕಾ ಟೆಸ್ಟ್‌ ಪಂದ್ಯಕ್ಕೆ ಸತತ 2ನೇ ದಿನವೂ ಭಾರೀ ಮಳೆಯಿಂದ ಅಡ್ಡಿಯಾಗಿದೆ.

Advertisement

ಹೀಗಾಗಿ ಪಾಕ್‌ ಆಟಗಾರರು ಡ್ರೆಸ್ಸಿಂಗ್‌ ರೂಮ್‌ನಲ್ಲೇ ಕ್ರಿಕೆಟ್‌ ಆಡಿ ದರು. ಬಾಂಗ್ಲಾ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅಂಗಳದಲ್ಲಿ ಈಜಾಡಿದರು. ಈ ಎರಡು ಚಿತ್ರಗಳು ಎಲ್ಲೆಡೆ ಹರಿದಾಡಿವೆ.

ಮೊದಲ ದಿನ 57 ಓವರ್‌ಗಳಷ್ಟು ಆಟ ನಡೆದಿತ್ತು. ಪಾಕಿಸ್ಥಾನ 2 ವಿಕೆಟಿಗೆ 161 ರನ್‌ ಮಾಡಿತ್ತು.

ಇದನ್ನೂ ಓದಿ:ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

ರವಿವಾರ ಸಾಧ್ಯವಾದದ್ದು 6.2 ಓವರ್‌ಗಳ ಆಟ ಮಾತ್ರ. ಪಾಕ್‌ ಹೆಚ್ಚಿನ ವಿಕೆಟ್‌ ಕಳೆದುಕೊಳ್ಳದೆ ತನ್ನ ಮೊತ್ತವನ್ನು 188ಕ್ಕೆ ಏರಿಸಿಕೊಂಡಿತು. ಅಜರ್‌ ಅಲಿ 52, ನಾಯಕ ಬಾಬರ್‌ ಆಜಂ 71 ರನ್‌ ಮಾಡಿ ಆಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next