ಮುಂಬಯಿ: ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದ ಪ್ರಮುಖ ವೇಗಿಗಳಾದ ಶಾರ್ದೂಲ್ ಠಾಕುರ್ ಮತ್ತು ತುಷಾರ್ ದೇಶಪಾಂಡೆ ಅವರು ಹಾಲಿ ಚಾಂಪಿಯನ್ ವಿದರ್ಭ ತಂಡದೆದುರಿನ ರಣಜಿ ಟ್ರೋಫಿ ಪಂದ್ಯಕ್ಕಾಗಿ ಮುಂಬಯಿ ತಂಡಕ್ಕೆ ಮರಳಿದ್ದಾರೆ.
ನಾಲ್ಕು ದಿನಗಳ ಈ ಪಂದ್ಯ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಡಿ. 30ರಿಂದ ಆರಂಭವಾಗಲಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆಗೈದ ಪಂದ್ಯದ ವೇಳೆ ಶಾದೂìಲ್ ತೊಡೆಸಂದು ಗಾಯಕ್ಕೆ ತುತ್ತಾಗಿದ್ದರು. ಅವರು ಆ ಪಂದ್ಯದಲ್ಲಿ ಕೇವಲ 10 ಎಸೆತ ಬೌಲಿಂಗ್ ಮಾಡಿದ್ದರು. ಆಬಳಿಕ ಅವರು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ದೇಶಪಾಂಡೆ ಕೂಡ ಕಳೆದೊಂದು ತಿಂಗಳಿಂದ ಕ್ರಿಕೆಟ್ ಆಟ ಆಡಿಲ್ಲ.
ಅಜಿತ್ ಅಗರ್ಕರ್ ನಾಯಕತ್ವದ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನು ಪ್ರಕಟಿಸಿದ್ದು ಇಬ್ಬರು ವೇಗಿಗಳನ್ನು ಹೆಸರಿಸಿದೆ. ಸಿದ್ದೇಶ್ ಲಾಡ್ ನಾಯಕರಾಗಿ ಮುಂದುವರಿಯಲಿದ್ದಾರೆ.
ಸದ್ಯ 11 ಅಂಕ ಗಳಿಸಿರುವ ಮುಂಬಯಿ ಎರಡು ಬಣಗಳನ್ನು ಸೇರಿಸಿದರೆ 14ನೇ ಸ್ಥಾನದಲ್ಲಿದೆ. 21 ಅಂಕ ಹೊಂದಿರುವ ವಿದರ್ಭ ಮೂರನೇ ಸ್ಥಾನದಲ್ಲಿದೆ. ಕ್ವಾರ್ಟರ್‌ಫೈನಲ್ ಹಂತಕ್ಕೆ ತಲುಪಬೇಕಾದರೆ ಮುಂಬಯಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.
ತಂಡ: ಸಿದ್ದೇಶ್ ಲಾಡ್ (ನಾಯಕ), ಶ್ರೇಯಸ್ ಅಯ್ಯರ್, ಆದಿತ್ಯ ತಾರೆ, ಶಾರ್ದೂಲ್ ಠಾಕುರ್, ಶಿವಂ ದುಬೆ, ಜಯ ಬಿಸ್ತ, ವಿಕ್ರಾಂತ್ ಆಟಿ, ಶುಭಂ ರಂಜನೆ. ಏಕನಾಥ್ ಕೇರ್ಕರ್, ಕಾರ್ಶ್ ಕೋಥಾರಿ, ದ್ರುಮಿಲ್ ಮಾತ್ಕರ್, ತನುಷ್ ಕೋಟ್ಯಾನ್, ಮಿನಾದ್ ಮಾಂಜ್ರೆàಕರ್, ತುಷಾರ್ ದೇಶಪಾಂಡೆ, ರಾಯ್‌ಸ್ಟನ್ ಡಯಾಸ್.