ದುಬೈ: ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕೂಟದಲ್ಲಿ ಪಾಕಿಸ್ಥಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಮಗಳು ಭಾರತದ ಧ್ವಜವನ್ನು ಬೀಸಿದ ವಿಡಿಯೋವೊಂದು ವೈರಲ್ ಆಗಿದೆ.
ಸೆಪ್ಟೆಂಬರ್ 4 ರಂದು ನಡೆದ ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್ ನ ಸೂಪರ್ ಫೋರ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ತನ್ನ ಮಗಳು ಭಾರತದ ಧ್ವಜವನ್ನು ಬೀಸಿದ್ದು ಹೌದು ಎಂದು ಸ್ವತಃ ಶಾಹಿದ್ ಅಫ್ರಿದಿ ಸ್ಪಷ್ಟ ಪಡಿಸಿದ್ದಾರೆ.
ಸ್ಥಳದಲ್ಲಿ ಪಾಕಿಸ್ತಾನದ ಧ್ವಜಗಳ ಕೊರತೆಯಿಂದಾಗಿ ತನ್ನ ಮಗಳು ಭಾರತದ ಧ್ವಜವನ್ನು ಬೀಸಿದಳು ಎಂದು ಶಾಹಿದ್ ಹೇಳಿದರು. ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕೇವಲ ಶೇಕಡಾ ಹತ್ತರಷ್ಟು ಪಾಕಿಸ್ತಾನಿ ಅಭಿಮಾನಿಗಳು ಮಾತ್ರ ಇದ್ದರು ಎಂದು ಪತ್ನಿ ನಂತರ ಹೇಳಿದರು. ಹೀಗಾಗಿ ಅಲ್ಲಿ ಪಾಕ್ ಧ್ವಜ ಸಿಗಲಿಲ್ಲ ಎಂದು ಅಫ್ರಿದಿ ಹೇಳಿದ್ದಾರೆ.
ಇದನ್ನೂ ಓದಿ:ಲಕ್ನೋ ಹೋಟೆಲ್ ನಲ್ಲಿ ಅಗ್ನಿ ಅವಘಡ ಪ್ರಕರಣ : 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ
ಏಷ್ಯಾಕಪ್ ನಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ಥಾನ ತಂಡ ಫೈನಲ್ ತಲುಪಿದೆ. ಇಂದು ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ.