Advertisement

ಕೆನರಾ ಬ್ಯಾಂಕ್‌ನಿಂದ ಸಂಚಾರಿ ಎಟಿಎಂ

06:09 PM Apr 16, 2020 | Naveen |

ಶಹಾಬಾದ: ಕೊರೊನಾ ಸೊಂಕು ನಿಯಂತ್ರಣಕ್ಕೆ ಪೂರಕವಾಗಿ ನಗರದ ಕೆನರಾ ಬ್ಯಾಂಕ್‌ ಶಾಖೆ ಸಂಚಾರಿ ಎಟಿಎಂ ಸೇವೆ ನೀಡುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ.

Advertisement

ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಹಣಮಂತರಾವ ದೇಗಾಂವ್‌ ಸಲಹೆ ಮೇರೆಗೆ ಸಂಚಾರಿ ಎಟಿಎಂ ಸೇವೆ ಆರಂಭಿಸಲಾಗಿದ್ದು, ಆಟೋಗಳ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ ಒಂದೊಂದು ಸಂಚಾರಿ ಎಟಿಎಂ ಸೇವೆ ಕಳಿಸಲಾಗಿದೆ. ಈ ಸೇವೆ ಮೂಲಕ ಗ್ರಾಹಕರು ತಮ್ಮ ಜನ್‌ಧನ್‌ ಖಾತೆಗೆ ಕೇಂದ್ರ ಸರಕಾರ ಪಾವತಿಸಿರುವ 500 ರೂ. ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಹಣ ಪಡೆದುಕೊಳ್ಳಲು ಪಾಸ್‌ ಬುಕ್‌ ಇರಲೆಬೇಕೆಂಬ ನಿಯಮವಿಲ್ಲ. ಕೇವಲ ಖಾತೆದಾರರು ತಮ್ಮ ಆಧಾರ ಕಾರ್ಡ್‌ ತೋರಿಸಿ ಹಣ ಪಡೆಯಬಹುದು ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ ಖಾತೆದಾರರು ತಮ್ಮ ಖಾತೆಯಿಂದ ನಿತ್ಯ 20 ಸಾವಿರ ರೂ. ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ಹಣವನ್ನು ಡಿಪಾಸಿಟ್‌ ಸಹ ಮಾಡಬಹುದಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬ್ಯಾಂಕ್‌ ಗಳಿಗೆ ಬರಲು ಆಗದಿರುವುದರಿಂದ ಮತ್ತು ಬ್ಯಾಂಕುಗಳಲ್ಲಿ ಜನಸಂದಣಿ ಆಗದಿರುವುದಕ್ಕೆ ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next