Advertisement
ಆಲೆಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಿವಾರ ಕಾನದಲ್ಲಿ ಜನರು ವಾಹನಕ್ಕಾಗಿ ಬಿಸಿಲು-ಮಳೆಯಲ್ಲಿ ನಿಲ್ಲುವ ಸ್ಥಿತಿ ಇದ್ದಾಗ ಖಾಸಗಿ ವ್ಯವಸ್ಥೆಯು ಒಂದು ತಂಗುದಾಣವನ್ನು ನಿರ್ಮಿಸಿ ಜನಹಿತ ಕಾರ್ಯವನ್ನು ಮಾಡಿತ್ತು. ಅಲ್ಲಿಂದೀಚೆಗೆ ಜನರು ಇದನ್ನು ಉಪಯೋಗಿಸುತ್ತಾ ಬಂದಿದ್ದರೂ ಇತ್ತೀಚೆಗೆ ಅದರ ಪರಿಸರದ ನಿರ್ವಹಣೆ ಸರಿ ಆಗದೆ ಅದರ ಸುತ್ತಲು ಪೊದೆಗಳು ಬೆಳೆದು ತಂಗುದಾಣಕ್ಕೆ ಹೋಗಲು ದಾರಿ ಸರಿಯಾಗಿ ಕಾಣದಾಗಿದೆ. ಪೊದೆಗಳು ಸುತ್ತುವರಿದಿರುವುದರಿಂದ ಆ ಕಡೆ ತೆರಳಲು ಹಾವುಗಳ ಭಯವೂ ಜನರನ್ನು ಕಾಡುತ್ತಿದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಜನ ಅದರತ್ತ ಹೋಗುವುದು ಕಡಿಮೆ ಆಗುತ್ತಿದ್ದಂತೆ ಅಲ್ಲಿ ಬೀದಿ ನಾಯಿಗಳು ಸೇರಿಕೊಳ್ಳಲಾರಂಭಿಸಿವೆ. ಇದರಿಂದಾಗಿ ಜನರು ಮತ್ತೆ ರಸ್ತೆ ಬದಿಯಲ್ಲೇ ವಾಹಕ್ಕೆ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.
Advertisement
Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!
12:49 PM Nov 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.