Advertisement

Uppinangady: ಎಟಿಎಂನಿಂದ ಕಳವಿಗೆ ಯತ್ನ

12:03 AM Oct 30, 2024 | Team Udayavani |

ಉಪ್ಪಿನಂಗಡಿ: ಬಾರ್ಯ ಮೂರುಗೋಳಿಯಲ್ಲಿ ಕಾರ್ಯಾಚರಿಸುವ ಎಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರು ಪರಿಶೀಲನೆ ನಡೆಸಿದ್ದಾರೆ.

Advertisement

ಕಳ್ಳರು ಮುಖಗವಸು, ಕೈಗೆ ಗ್ಲೌಸ್‌ ಧರಿಸಿ ಎಟಿಎಂ ಮೆಷಿನ್‌ ಮುರಿಯಲು ಪ್ರಯತ್ನಿಸಿದ್ದಾರೆ. ಬಾಗಿಲು ತೆರೆಯುವ ಪಾಸ್‌ವರ್ಡ್‌ ಅವರಿಗೆ ಸಿಕ್ಕಿಲ್ಲ. ಹಾಗಾಗಿ ನಗದು ಕೋಶದ ಬಾಗಿಲು ತೆರೆಯಲು ವಿಫ‌ಲರಾಗಿದ್ದಾರೆ ಎನ್ನಲಾಗಿದೆ.

ಎಟಿಎಂ ಯಂತ್ರ ತೆರೆಯಲು ತಂತ್ರಜ್ಞರ ಆಗಮನದ ಬಳಿಕ ಹಣ ಏನಾದರೂ ತೆಗೆದಿದ್ದಾರೆಯೇ ಎನ್ನುವ ನಿಖರ ಮಾಹಿತಿ ಲಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next