Advertisement
ಉತ್ತರಾಖಂಡದಲ್ಲಿ ನಡೆದ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮೇಲಿನ ಮಾತುಗಳನ್ನಾಡಿದ್ದಾರೆ. “ಪ್ರವಾಹ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಾಯಕರು ಕಾಣಿಸಲೇ ಇಲ್ಲ. ಆದರೆ ಚುನಾವಣೆ ಹತ್ತಿರ ಬಂದಾಕ್ಷಣ ಅವರು ಕಾಣಿಸಿಕೊಂಡು, ಸುದ್ದಿ ಗೋಷ್ಠಿಗಳನ್ನು ಮಾಡಲಾರಂಭಿಸುತ್ತಾರೆ. ನಾನು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಹರೀಶ್ ಅವರಿಗೆ ಸವಾಲು ಹಾಕುತ್ತೇನೆ. ಅವರು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಆಶ್ವಾಸನೆಯಲ್ಲಿ ಎಷ್ಟು ಪೂರೈಸಿದ್ದಾರೆ ಮತ್ತು ನಾವು ಎಷ್ಟು ಪೂರೈಸಿದ್ದೇವೆ ಎನ್ನುವುದರ ಬಗ್ಗೆ ಬಹಿರಂಗ ಚರ್ಚೆಯಾಗಲಿ’ ಎಂದು ಅಮಿತ್ ಶಾ ಹೇಳಿದ್ದಾರೆ.
Related Articles
Advertisement